ಹೆಬ್ರಿ ತಾಲೂಕು ರಿಕ್ಷಾ ಚಾಲಕ, ಮಾಲೀಕರ ಸಂಘದ ಕ್ರೀಡಾಕೂಟ, ಪುರ ಮೆರವಣಿಗೆ, ಸಂಘದ ವಾರ್ಷಿಕ ಮಹಾ ಸಭೆ, ಸನ್ಮಾನ ಮತ್ತು ಪ್ರೋತ್ಸಾಹಧನ ವಿತರಣೆ ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ರಿಕ್ಷಾ ಪುರಮೆರವಣಿಗೆ ಹಾಗೂ ಸದಸ್ಯರ ಕ್ರೀಡಾಕೂಟಕ್ಕೆ ಹೆಬ್ರಿ ಠಾಣಾಧಿಕಾರಿ ರವಿ ಬಿ.ಕೆ. ಚಾಲನೆ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ರಿಕ್ಷಾ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ ಕುಚ್ಚೂರು ವಹಿಸಿದ್ದರು.

ಸಂಘದ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯಕ್, ಕಾನೂನು ಸಲಹೆಗಾರ ನ್ಯಾಯವಾದಿ ಭರತ್ ಕುಮಾರ್ ಶೆಟ್ಟಿ ಸಂಘದ ಕಾರ್ಯದರ್ಶಿ ಶ್ರೀನಾಥ ಶೆಟ್ಟಿಗಾರ್, ಸುಬ್ರಮಣ್ಯ ದೇವಾಡಿಗ ಮೊದಲಾದವರಿದ್ದರು. ಸಂಘದ ಏಳಿಗೆಗೆ ಕಾರಣೀಕರ್ತರಾದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ನೂತನ ರಾಜ್ಯಾಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಉಮೇಶ್ ಪೈ ಮುದ್ರಾಡಿ ಮತ್ತು ರಮೇಶ್ ನಾಯ್ಕ್ ಅವರನ್ನು ಗೌರವಿಸಲಾಯಿತು. ಮಹಾಸಭೆ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

