ಬಂಟ್ವಾಳ : ಬರವುದ ಬಿತ್ತಿಲ್ಲ್ಡ್‌ ಆಟಿದ ಲೇಸ್

0
12

ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿಇಂಗ್ಲೀಷ್ ಮೀಡಿಯಂ ಶಾಲೆ ವಿದ್ಯಾಗಿರಿ ಬಂಟ್ವಾಳ, ಇಲ್ಲಿಸ್ಕೌಟ್, ಗೈಡ್ಸ್, ಎನ್.ಸಿ.ಸಿ ಘಟಕದ ವತಿಯಿಂದ‘ಬರವುದ ಬಿತ್ತಿಲ್ಲ್ಡ್‌ಆಟಿದ ಲೇಸ್’ಕಾರ್ಯಕ್ರಮವುನಡೆಯಿತು.ಎಸ್.ವಿ.ಎಸ್‌ಕಾಲೇಜಿನ ಪ್ರಾಂಶುಪಾಲರಾದಪ್ರೊ.ಎಂಡಿ ಮಂಚಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಆಟಿ ತಿಂಗಳಿನ ಮಹತ್ವವನ್ನುಕುರಿತು ತಿಳಿಸಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಹರಿಪ್ರಸಾದ್‌ಕಾರ್ಯಕ್ರಮದಅಧ್ಯಕ್ಷತೆಯನ್ನುವಹಿಸಿ ಸ್ಥಳೀಯ ಆಚರಣೆಗಳ ಕುರಿತುಮಕ್ಕಳಿಗೆ ಅರಿವು ಮೂಡಿಸಿದರು.ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಚೈತ್ರ ಶೆಟ್ಟಿಮತ್ತು ಪೂರ್ವಪ್ರಾಥಮಿಕ ವಿಭಾಗದಸಂಯೋಜಕಿಯಾದ ವೀಣಾ ಉಪಸ್ಥಿತರಿದ್ದರು.

ಸಾಂಸ್ಕೃತಿಕಕಾರ್ಯಕ್ರಮದ ಅಂಗವಾಗಿ ವಿವಿಧ ತುಳು ನೃತ್ಯ, ಹಾಡು, ಪ್ರಹಸನ ನಡೆದವು ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಆಟಗಳನ್ನು ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಯಿತು. ಆಟಿ ತಿಂಗಳ ವಿಶಿಷ್ಟ ಖಾದ್ಯಗಳನ್ನು ಪೋಷಕರ ಸಹಯೋಗದಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಸಂಸ್ಕೃತಿಕ ಸೊಗಡು ಮತ್ತು ನಮ್ಮ ತುಳುನಾಡಿನ ಪರಂಪರೆಯ ಪರಿಚಯದೊಂದಿಗೆಕಾರ್ಯಕ್ರಮ ನೆರವೇರಿತು.ಯಸ್ಮಿತಾ ವೈ ಅವರತಂಡದಿಂದ ತುಳು ಪಾಡ್ದನ ನೆರವೇರಿತು.

ವಿದ್ಯಾರ್ಥಿಗಳಾದ ತನುಷ್ ಶೆಟ್ಟಿ ಸ್ವಾಗತಿಸಿದರು, ಪ್ರಜ್ಞೇಶ್ ವಂದಿಸಿ, ಕುಮಾರಿ ಆಶ್ನಿ.ಆರ್.ಶೆಟ್ಟಿ ಮತ್ತು ಕು. ನಿತೀಕ್ಷಾ ನಿರೂಪಿಸಿದರು.

LEAVE A REPLY

Please enter your comment!
Please enter your name here