ಬಂಟ್ವಾಳ: ಕಾರಿಂಜೇಶ್ವರ ದೇಗುಲದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು

0
608

ಬಂಟ್ವಾಳ: ಕಾರಿಂಜೇಶ್ವರ ದೇಗುಲದ ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ವಗ್ಗ ಕಾರಿಂಜ ಕ್ರಾಸ್ ಬಳಿಯ ಕಂಗಿತ್ತಿಲು ನಿವಾಸಿ ಶ್ರೀಧರ ಮೂಲ್ಯ ಅವರ ಪುತ್ರ ಚೇತನ್ (17) ಮೃತ ವಿದ್ಯಾರ್ಥಿ, ಈತ ಬಂಟ್ವಾಳ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಈತ.

ಚೇತನ್ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡುತ್ತಿದ್ದ. ಅದೇ ರೀತಿ ಜೂ.7 ರ ಶನಿವಾರ ಸ್ನೇಹಿತ ಪ್ರಶ್ಚಿತ್ ಜೊತೆಗೆ ದೇವಸ್ಥಾನಕ್ಕೆ ಹೋಗಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯೊಳಗೆ ಬಿದ್ದಿದ್ದಾನೆ.

ಪ್ರಶ್ನಿತ್‌ಗೆ ಈಜು ಬಾರದ ಕಾರಣ ಬೊಬ್ಬೆ ಹೊಡೆದು ಸ್ಥಳೀಯರನ್ನು ಕರೆದಿದ್ದಾನೆ. ಕೂಡಲೇ ಸ್ಥಳೀಯರು ಬಂದಿದ್ದು, ಶ್ರವಣ್ ಜೈನ್ ಹಾಗೂ ಉದಯ ಮಾಂಗಾಜಿ ಅವರು ಕೆರೆಗೆ ಹಾರಿದ್ದಾರೆ. ನಂತರ ಚೇತನ್ನನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಅಷ್ಟರಲ್ಲಿ ಚೇತನ್ ಸಾವಿಗೀಡಾಗಿದ್ದಾನೆ.ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here