ಕೊಂಜಾಡಿ ಭಜನ ಮಂಡಳಿಗೆ ಬಸವಶ್ರೀ ಕಾಯಕ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

0
5

ಮೂಲ್ಕಿ : ಬೆಳ್ವೆ ಕೊಂಜಾಡಿಯ ಶ್ರೀ ದುರ್ಗಾಪರಮೇಶ್ವರೀ ಭಜನ ಮಂಡಳಿಗೆ ಬಸವ ಜಯಂತಿ ಅಂಗವಾಗಿ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆ ವತಿಯಿಂದ ಕನ್ನಡ ಮತ್ತು ಇಲಾಖೆಯ ಸಹಯೋಗದಲ್ಲಿ ಬಸವ ಶ್ರೀ ಕಾಯಕ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಿತು.

ಕುಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಡಾ| ಗುರುಬಸವ ಮಹಾಸ್ವಾಮೀಜಿ ಪ್ರಶಸ್ತಿ ನೀಡಿ ಗೌರವಿಸಿದರು. ನಾಡಿನ ಏಳಿಗೆಗೆ ಧಾರ್ಮಿಕ ಹಾಗೂ ಸಮಾಜಿಕ ಸೇವಾ ಕ್ಷೇತ್ರಗಳಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರು, ಸಂಘ ಸಂಸ್ಥೆಗಳಿಗೆ ನೀಡಲಾಗುವ ಪ್ರಶಸ್ತಿ ಇದಾಗಿದೆ.

ಈ ಸಂದರ್ಭ ನಿವೃತ್ತ ಐಪಿಎಸ್ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ, ಚಲನಚಿತ್ರ ನಟ ಅನಿರುದ್ ಜತ್ಕರ್, ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ವಿರಾಜಪೇಟೆಯ ಸ್ಥಾವಾಕಧ್ಯಕ್ಷೆ ಪ್ರೇಮಾಂಜಲಿ ಆಚಾರ್ಯ, ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here