ಬಸ್ರೂರು ಜನಸೇವಾ ವಿವಿದೋದ್ದೇಶ ಸಹಕಾರಿ ಸಂಘ‌ (ನಿ)ಇದರ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ

0
45

ಸುಧೀರ್ಘ ಇಪ್ಪತ್ತ ಮೂರು ವರ್ಷಗಳ ಕಾಲ ಜನಸೇವಾ ವಿವಿದೋದ್ದೇಶ ಸಹಕಾರಿ ಸಂಘ ಬ್ಯಾಂಕಿಂಗ್ ವ್ಯವಹಾರಗಳ ಮೂಲಕ ಜನ ಮನ್ನಣೆ ಪಡೆದ ಸಂಸ್ಥೆಯಾಗಿದ್ದು , ವರ್ಷದಿಂದ ವರ್ಷಕ್ಕೆ ಲಾಭಾಂಶಗಳು ವೃದ್ಧಿಯಾಗುತ್ತಿದ್ದು,ಇದೀಗ ಸಂಸ್ಥೆ ಸ್ವಂತ ಕಟ್ಟಡಕ್ಕೆ ಹೆಜ್ಜೆ ಇಟ್ಟಿದ್ದು ,ನೂತನ ಕಟ್ಟದ ಶಿಲಾನ್ಯಾಸವನ್ನು ನಿವೃತ್ತ ಸಹಕಾರ ಸಂಘ ಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್. ವಿ ಹಾಗೂ ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧಿಕಾರಿಯಾದಂತ ಎಮ್ ಮೋಹನ್ ದಾಸ್ ಹೆಬ್ಬಾರ್ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ಪಿ.ಜಗನ್ನಾಥ ಶೆಟ್ಟಿ ಇವರು ಭೂಮಿ ಪೂಜೆ ನೆರವೇರಿಸಿದರು.

ಈ ಸಮಯದಲ್ಲಿ ಉಪಾಧ್ಯಕ್ಷರಾದ ಜಯಲಕ್ಷ್ಮೀ ಎಂ .ವಿ,ನಿರ್ದೇಶಕರಾದ ಹೆಚ್.ಎಸ್.ಹತ್ವಾರ್, ದಯಾನಂದ ಜಿ, ವಿಶಾಲಕ್ಷೀ ಎಂ, ಕೆ.ವಿ.ಬಾಲಚಂದ್ರ ಶೆಟ್ಟಿ, ಟಿ.ಎಮ್.ಪುರಾಣಿಕ್, ರಾಘವೇಂದ್ರ.ವೈ.ಎಸ್., ಕಿರಣ್ ಆರ್.ನಾಯ್ಕ್, ಶ್ರೀಧರ್ ಸುವರ್ಣ, ಪ್ರವೀಣ್ ಕುಮಾರ್.ಟಿ, ತಿಮ್ಮಪ್ಪ ನಾಯ್ಕ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಾದ ಅಶೋಕ ಬಳ್ಕೂರು,ಸಿಬ್ಬಂದಿ ವರ್ಗ ಈ ಸಮಯದಲ್ಲಿ ಹಾಜರಿದ್ದರು. ಪೂಜಾ ಕಾರ್ಯವನ್ನು ಶ್ರೀಯುತ ಪ್ರಭಾಕರ ಪುರಾಣಿಕರು ನೆರವೇರಿಸಿದರು.

LEAVE A REPLY

Please enter your comment!
Please enter your name here