ಹಿಮದಂತಹ ತಣ್ಣನೆ ಪಾನೀಯದ ಮೂಲಕ ಬಿಸಿಲಿನ ಬೇಗೆಯನ್ನು ಸೋಲಿಸಿ: ದಕ್ಷಿಣ ಭಾರತದಲ್ಲಿ 7ಅಪ್® ನಿಂದ ಹೊಸ ಜಾಹೀರಾತು ಅಭಿಯಾನ ಬಿಡುಗಡೆ

0
22

• 7ಅಪ್®ನ ಆಹ್ಲಾದಕರ ರುಚಿಯನ್ನು ಪ್ರಚುರ ಪಡಿಸುವುದಲ್ಲದೆ, 400 ಎಂ.ಎಲ್ ಬಾಟಲ್ ಕೇವಲ ₹20ಕ್ಕೆ ನೀಡುವ ಮೂಲಕ ಹೆಚ್ಚಿನ ಮೌಲ್ಯ ಒದಗಿಸುತ್ತದೆ ಎಂದು ಈ ಹೊಸ ಜಾಹೀರಾತು ಅಭಿಯಾನ ಸಾರಲಿದೆ.

• ಜಾಹೀರಾತು ಅಭಿಯಾನದ ಲಿಂಕ್: https://www.youtube.com/watch?v=bkxY3dfNnyY

ಪೆಪ್ಸಿಕೋ ಇಂಡಿಯಾ ಸಮೂಹದ ತಂಪು ಪಾನೀಯ 7ಅಪ್® ಕರ್ನಾಟಕದಲ್ಲಿ ತನ್ನ ಹೊಸ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ.

‘ಸೂಪರ್ ಡೂಪರ್ ರಿಫ್ರೆಶರ್’ ಎಂಬ ತನ್ನ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಿಕೊಂಡಿರುವ ಸಂಸ್ಥೆಯು ₹20/- ಕ್ಕೆ 400 ಎಂ.ಎಲ್ ಬಾಟಲ್ ಅನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಕಡಿಮೆ ಹಣದಲ್ಲಿ ಹೆಚ್ಚಿನ ಬೆಲೆಯ ತಂಪು ಪಾನೀಯವನ್ನು ಒದಗಿಸುತ್ತಿರುವುದಾಗಿ ಸಾರಿದೆ. ತಣ್ಣನೆ ಪಾನೀಯ ಮತ್ತು ಉತ್ತಮ ಮೌಲ್ಯವನ್ನು ಒದಗಿಸುವ ಭರವಸೆ ನೀಡುವ ಉದ್ದೇಶದಿಂದಲೇ ಈ ಹೊಸ ಜಾಹೀರಾತು ಅಭಿಯಾನ ರೂಪಿಸಲಾಗಿದೆ.

ದಕ್ಷಿಣ ಭಾರತದಾದ್ಯಂತ, ವಿಶೇಷವಾಗಿ ಕರ್ನಾಟಕದಲ್ಲಿ ಬೇಸಿಗೆಯು ಮೊದಲೇ ಪ್ರಾರಂಭವಾಗುವುದರಿಂದ ಈ ವಿಶೇಷ ಮೌಲ್ಯಪ್ರಜ್ಞೆಯುಳ್ಳ ಮಾರುಕಟ್ಟೆಗಾಗಿ ಈ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದ್ದು, ಈ ಅಭಿಯಾನವು 7ಅಪ್® ಅನ್ನು ಪ್ರಮಾಣ, ಆಹ್ಲಾದತೆ ಮತ್ತು ಕೈಗೆಟುಕುವ ದರ ಇವೆಲ್ಲವನ್ನೂ ಒಳಗೊಂಡ ಪ್ರತಿದಿನದ ತಂಪು ಪಾನೀಯದ ಆಯ್ಕೆಯಾಗಿ ಬಿಂಬಿಸುತ್ತದೆ. ‘ಸೂಪರ್ ಡೂಪರ್ ರಿಫ್ರೆಶರ್’ ಪರಿಕಲ್ಪನೆಯ ಆಧಾರದಲ್ಲಿ ರೂಪುಗೊಂಡಿರುವ ಈ ಅಭಿಯಾನವು 7ಅಪ್®ನ ಪ್ರಸ್ತುತತೆಯನ್ನು ಸಾರುತ್ತದೆ. ಸಾಮಾನ್ಯವಾಗಿ ಅತಿಯಾದ ಸೆಕೆ ಇದ್ದಾಗ, ಗ್ರಾಹಕರು ತಮ್ಮ ಜೇಬಿಗೆ ಹೊರೆಯಾಗದಂತೆ ಹೆಚ್ಚು ತಂಪಾದ ಪಾನೀಯ ಬಯಸುತ್ತಾರೆ. ಅದರ ಜೊತೆಗೆ ಉತ್ತಮ ಮೌಲ್ಯವನ್ನೂ ಒದಗಿಸುವ ಮೂಲಕ 7ಅಪ್® ಅನ್ನು ಜನರ ಪಾನೀಯವಾಗಿ ರೂಪಿಸಿರುವುದಾಗಿ ಅಭಿಯಾನ ಪ್ರತಿಬಿಂಬಿಸುತ್ತದೆ.

ಈ ಅಭಿಯಾನವು ಆಹ್ಲಾದತೆಯ ಪರಿಕಲ್ಪನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಲುವಾಗಿ ‘ಹಿಮದಂತಹ ತಾಜಾತನ’ದ ಎಂಬ ಅಭಿವ್ಯಕ್ತಿಯನ್ನು ಪರಿಚಯಿಸುತ್ತದೆ. ಪಾನೀಯಗಳ ವಿಭಾಗದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ತಂಪಾದ ಪಾನೀಯ ಎಂಬ ಸಂಕೇತಗಳ ನಡುವೆ, ತೀವ್ರವಾದ ಸೆಕೆಗೆ ತಕ್ಷಣದ ಶಮನ ಮತ್ತು ಆಹ್ಲಾದತೆ ನೀಡುವ ನೀಡುವ ದೃಶ್ಯ ರೂಪಕವಾಗಿ ‘ಹಿಮ’ವನ್ನು ಬಳಸಲಾಗಿದೆ. ಈ ಮೂಲಕ ಈ ವಿಭಾಗಕ್ಕೆ ಹೊಸತಾಗಿರುವ ಮತ್ತು 7ಅಪ್® ಗೆ ಮಾತ್ರವೇ ಸೀಮಿತವಾದ ಒಂದು ವಿಶಿಷ್ಟ ದೃಶ್ಯ ಭಾಷೆಯನ್ನು ಸೃಷ್ಟಿಸಲಾಗಿದೆ.

ಯುವ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ‘ಹಿಮ ಸ್ಫೋಟ’ ಪರಿಕಲ್ಪನೆಯ ಅಭಿಯಾನವು ಬ್ರ್ಯಾಂಡ್‌ನ ಒಂದು ವಿಶಿಷ್ಟ ಆಸ್ತಿಯಾಗಿ ಹೊರಹೊಮ್ಮಿದ್ದು, ಇದು 7ಅಪ್® ನ ಅಸ್ಮಿತೆಯನ್ನು ಬಲಪಡಿಸುವ ಮತ್ತು ತಂಪು ಪಾನೀಯಗಳ ಮಾರುಕಟ್ಟೆಯಲ್ಲಿ ಅದರ ಉಪಸ್ಥಿತಿಯನ್ನು ಗಾಢಗೊಳಿಸುವ ಸಂಕೇತವಾಗಿ ಮೂಡಿಬಂದಿದೆ. ಮೌಲ್ಯಯುತ ಪ್ಯಾಕ್ ನ ಕೊಡುಗೆಯ ಜೊತೆಗೆ ಈ ಹಿಮದಂತಹ ತಾಜಾತನವನ್ನು ಜೋಡಿಸುವ ಮೂಲಕ, ಈ ಅಭಿಯಾನವು 7ಅಪ್® ಅನ್ನು ಕರ್ನಾಟಕದಾದ್ಯಂತ ಬೇಸಿಗೆಯ ಕ್ಷಣಗಳಲ್ಲಿ ಬಳಸಬಹುದಾದ ಪ್ರತಿದಿನದ ಒಂದು ಆಕರ್ಷಕ ಆಯ್ಕೆಯನ್ನಾಗಿ ಮಾಡಿದೆ.

ಈ ಅಭಿಯಾನದ ಕುರಿತು ಮಾತನಾಡಿದ ಪೆಪ್ಸಿಕೋ ಇಂಡಿಯಾ ಬೆವರೇಜಸ್‌ ನ ಮುಖ್ಯ ಮಾರುಕಟ್ಟೆ ಅಧಿಕಾರಿ ಮತ್ತು ಲೀಡ್ – ಅವೇ ಫ್ರಮ್ ಹೋಮ್ ಚಾನಲ್ ಆಗಿರುವ ತರುಣ್ ಭಗತ್ ಅವರು, “ಪೆಪ್ಸಿಕೋ ಇಂಡಿಯಾದಲ್ಲಿ, ನಾವು ಯಾವಾಗಲೂ ತಂಪು ಪಾನೀಯಗಳ ವಿಭಾಗದಲ್ಲಿ ಅತ್ಯಂತ ಚುರುಕಾದ ಮತ್ತು ವಿಶಿಷ್ಟವಾದ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಿರುತ್ತೇವೆ. ದಕ್ಷಿಣದ ಮಾರುಕಟ್ಟೆಗಳಲ್ಲಿ ಬೇಸಿಗೆಯು ಮೊದಲೇ ಆಗಮಿಸುತ್ತಿರುವುದರಿಂದ 7ಅಪ್® ನ ಈ ಹೊಸ ಮಾದರಿಯ ಅಭಿಯಾನದ ಮೂಲಕ ಅತ್ಯಂತ ತಂಪಾದ ಅನುಭವವು ಹೇಗಿರುತ್ತದೆ ಎಂಬುದನ್ನು ಸಾರಿದ್ದೇವೆ. ಈ ಅಭಿಯಾನವು ನಮ್ಮ ‘ಸೂಪರ್ ಡೂಪರ್ ರಿಫ್ರೆಶರ್’ ಸ್ಥಾನಮಾನವನ್ನು ಬಲಪಡಿಸುವುದಲ್ಲದೆ, ₹20/- ಕ್ಕೆ 400 ಎಂ.ಎಲ್ ಒದಗಿಸುವ ಮೂಲಕ ಅತ್ಯುತ್ತಮ ಮೌಲ್ಯವನ್ನು ನಡುತ್ತಿರುವುದಾಗಿ ಸಾರಿದೆ” ಎಂದು ಹೇಳಿದರು.

ಲಿಯೋ ಬರ್ನೆಟ್ ಸೌತ್ ಏಷ್ಯಾದ ಚೀಫ್ ಕ್ರಿಯೇಟಿವ್ ಆಫೀಸರ್ ವಿಕ್ರಮ್ ಪಾಂಡೆ ಅವರು ಮಾತನಾಡಿ, “ಬೆಲೆಯ ಕುರಿತಾದ ಚರ್ಚೆಯನ್ನು 7ಅಪ್ ನ ವಿಶಿಷ್ಟ ಶೈಲಿಯಲ್ಲಿ ಸ್ಮರಣೀಯ ಕ್ಷಣವನ್ನಾಗಿ ಬದಲಾಯಿಸುವುದು ನಮಗೆ ಸವಾಲಾಗಿತ್ತು. ಅನಂತರ ಪಾನೀಯ ವಿಭಾಗದಲ್ಲಿ ಇದುವರೆಗೆ ಬಳಸಿರದ ‘ಹಿಮ’ವನ್ನು ಒಂದು ದೃಶ್ಯ ರೂಪಕವಾಗಿ ಬಳಸುವ ಮೂಲಕ ಈ ಚಿತ್ರವನ್ನು ಮೇಲ್ದರ್ಜೆಗೇರಿಸಿದ್ದೇವೆ. ಇದು ಬ್ರ್ಯಾಂಡ್ ಪಾಲಿಗೆ ಒಂದು ದಿಟ್ಟ ಹೆಜ್ಜೆಯಾಗಿದ್ದು, 7ಅಪ್ ಮಾತ್ರ ಈ ರೀತಿ ಆಹ್ಲಾದತೆ ಒದಗಿಸಬಲ್ಲ ಪಾನೀಯ ಎಂಬ ಹಕ್ಕನ್ನು ಮಾರುಕಟ್ಟೆಯಲ್ಲಿ ಸಾರಿದೆ” ಎಂದು ತಿಳಿಸಿದರು.

ಈ ಅಭಿಯಾನವು ಫೆಬ್ರವರಿ 1, 2026 ರಿಂದ ಕರ್ನಾಟಕದಲ್ಲಿ ಪ್ರಸಾರವಾಗುತ್ತಿದ್ದು, ನಂತರ ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರಾದೇಶಿಕ ಭಾಷೆಗಳ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಹೊಂದಿರಲಿದ್ದು, ಟಿವಿ, ಡಿಜಿಟಲ್, ಹೊರಾಂಗಣ ಜಾಹೀರಾತು ಮತ್ತು ಸೋಷಿಯಲ್ ಮೀಡಿಯಾಗಳ ಮೂಲಕ ವ್ಯಾಪಕವಾಗಿ ಪ್ರಸಾರವಾಗಲಿದೆ.

7ಅಪ್® ಈಗ ಭಾರತದಾದ್ಯಂತ ಮಾಡರ್ನ್ ಟ್ರೇಡ್, ಸಾಂಪ್ರದಾಯಿಕ ರೀಟೇಲ್ ಮಳಿಗೆಗಳು, ಇ- ಕಾಮರ್ಸ್ ಮತ್ತು ಕ್ವಿಕ್- ಕಾಮರ್ಸ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ಸಿಂಗಲ್- ಸರ್ವ್ ಮತ್ತು ಮಲ್ಟಿ- ಸರ್ವ್ ಪ್ಯಾಕ್‌ ಗಳಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here