ಭಾವಿ ಪತಿಯ ಎದುರೆ ಅಪಘಾತದಲ್ಲಿ ಮೃತ್ಯು

0
203

ವರದಿ : ರಾಯಿ ರಾಜ ಕುಮಾರ

ನಂತೂರ ಬಳಿ ನಡೆದ ಭೀಕರ ಅಪಘಾತದಲ್ಲಿ ಭಾವಿ ಪತಿಯೊಂದಿಗೆ ಬೈಕಿನಲ್ಲಿ ಚಲಿಸುತ್ತಿದ್ದ ಈಗಾಗಲೇ ನಿಶ್ಚಿತಾರ್ಥ ಪೂರೈಸಿದ್ದ ಹಸೆಮಣೆ ಇರಬೇಕಿದ್ದ ಯುವತಿ ಭಾವಿ ಪತಿ ಎದುರಿಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಮೂಡುಬಿದಿರೆ ಮಂಗಳೂರು ನಡುವೆ ಸಂಚರಿಸುತ್ತಿದ್ದ ಶ್ರೀ ಗಣೇಶ್ ಬಸ್ಸು ಬೈಕಿಗೆ ಹಿಂದಿನಿಂದ ಗುದ್ದಿದ ಕಾರಣ ಈ ದುರ್ಘಟನೆ ಸಂಭವಿಸಿದೆ.

ಖಾಸಗಿ ಬಸುಗಳ ಆಟಾಟೋಪದ, ಒಟ್ಟಾರೆ ನುಗ್ಗುವ, ಅನಿಯಂತ್ರಿತ ಚಾಲನೆಯ ಕಾರಣದಿಂದಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತಿದೆ. ಸರಕಾರಿ ಬಸವಗಳಂತೆ ಖಾಸಗಿ ಬಸ್ಸುಗಳಿಗೂ ಕೂಡ ಸ್ಪೀಡ್ ಬ್ರೇಕರ್ ಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ರಕ್ಷಣೆ ಅಗತ್ಯ ಇದೆ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.

ಖಾಸಗಿ ಬಸ್ಸುಗಳಲ್ಲಿ ಬಾಗಿಲು ಇದ್ದು ಕೂಡ ಹಾಕದೇ ಇರುವ ಕ್ರಮದಿಂದಾಗಿಯೂ ಕೂಡ ಹಲವಾರು ದುರ್ಘಟನೆಗಳು, ಜರಗಿರುವುದು ಗಮನಕ್ಕೆ ಬಂದಿರುತ್ತದೆ. ಪ್ರಯಾಣಿಕರು ಆ ಬಗ್ಗೆ ಕೂಡ ಕ್ರಮವಹಿಸುವಂತೆ ಆರ್ ಟಿ ಓ ಅವರಿಗೆ ವಿನಂತಿಸಿದ್ದಾರೆ.
.

LEAVE A REPLY

Please enter your comment!
Please enter your name here