Saturday, June 14, 2025
Homeಬೆಳ್ತಂಗಡಿಬೆಳ್ತಂಗಡಿ: ಅಟೋ ರಿಕ್ಷಾ ಚಾಲನೆ ವೇಳೆ ಹಾರ್ಟ್ ಅಟ್ಯಾಕ್ - ಚಾಲಕ ನಿಧನ

ಬೆಳ್ತಂಗಡಿ: ಅಟೋ ರಿಕ್ಷಾ ಚಾಲನೆ ವೇಳೆ ಹಾರ್ಟ್ ಅಟ್ಯಾಕ್ – ಚಾಲಕ ನಿಧನ

ಬೆಳ್ತಂಗಡಿ: ರಿಕ್ಷಾ ಚಾಲನೆ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ಸಾವನಪ್ಪಿದ ಘಟನೆ ಮಂಗಳವಾರ ಬೆಳಿಗ್ಗೆ ಕೊಕ್ಕಡ ಸಮೀಪ ಕೆಂಪಕೋಡಿನಲ್ಲಿ ನಡೆದಿದೆ.

ಮೃತರನ್ನು ಕೆಂಪಕೋಡು ನಿವಾಸಿ ಶರತ್ ಕುಮಾರ್ ಕೆ (36) ಎಂದು ಗುರುತಿಸಲಾಗಿದೆ.

ಶರತ್ ಕುಮಾ‌ರ್ ಅವರು ಪ್ರತಿದಿನದಂತೆ ಬೆಳಿಗ್ಗೆ ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ಮರಳುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುವ ನಡುವೆಯೇ ನಿಧನರಾದರು.

ಕೂಡಲೇ ಗಮನಿಸಿದ ಸ್ಥಳೀಯರು ಶರತ್ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲುಪಿಸಿದರು. ಆದರೆ, ಅದಾಗಲೇ ಅವರು ನಿಧನ ಹೊಂದಿದ್ದರು. ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಶರತ್ ಕುಮಾರ್ ಅವರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular