ಬೆಳ್ತಂಗಡಿ : ದನದ ಕೊಟ್ಟಿಗೆ, ರಬ್ಬರ್ ಸೋಕ್ ಹೌಸ್ ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ

0
133

ಇಂದಬೆಟ್ಟು ಗ್ರಾಮದ ತುರ್ಕರೆಬೆಟ್ಟು ರಾಜೇಶ್ ಬಿನ್ ಉರ್ಮಿಶ್ ರವರ ದನದ ಹಟ್ಟಿ, ಕೊಟ್ಟಿಗೆ ಹಾಗೂ ರಬ್ಬರ್ ಸ್ಟೋಕ್ ಹೌಸ್ ಗೆ ಡಿ.19 ರಂದು ತಡ ರಾತ್ರಿ 12.30 ರ ವೇಳೆಗೆ ಆಕಸ್ಮಿಕ ಬೆಂಕಿ ತಗಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿದೆ. ಈ ಸಂದರ್ಭದಲ್ಲಿ ಸ್ಥಳಿಯರ ತುರ್ತು ಸಹಕಾರದಿಂದ ಹಟ್ಟಿಯಲ್ಲಿ ಕಟ್ಟಿದ್ದ ದನ ಹಾಗೂ ಕರುವನ್ನು ರಕ್ಷಿಸಲಾಗಿದೆ, ನೀರು ಹಾಕಿ ಬೆಂಕಿ ನಂದಿಸಲಾಗಿದೆ, ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಕೊಟ್ಟಿಗೆಯಲ್ಲಿ ಇದ್ದ ರಬ್ಬರ್ ಸೀಟ್, ಅಡಿಕೆ ಹಾಗೂ ಕೃಷಿ ಸಂಬಂಧಿತ ಉಪಕರಣಗಳು, ಮೇಲ್ಮಾವಣಿ ಸುಟ್ಟು ಹೋಗಿದೆ. ಸ್ಥಳಕ್ಕೆ ಇಂದಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾಲತಾ, ಸದಸ್ಯರಾದ ಶ್ರೀಕಾಂತ್ ಎಸ್, ಶ್ರೀಮತಿ ಸುಮಿತ್ರಾ, ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ, ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here