ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣಗರಿ ಬುಲ್ ಬುಲ್ ವಿಭಾಗದ ಪರೀಕ್ಷಾ ಶಿಬಿರ

0
89

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣಗರಿ ಬುಲ್ ಬುಲ್ ವಿಭಾಗದ ಪರೀಕ್ಷಾ ಶಿಬಿರವು ದಿನಾಂಕ – 02.04.2025 ರಂದು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿಯಲ್ಲಿ ವಿವಿಧ ಚಟುವಟಿಕೆಗಳಿಂದ ಅರ್ಥವತ್ತಾಗಿ ನಡೆಯಿತು.
ಜಿಲ್ಲಾ ಸ್ಕೌಟ್ ಆಯುಕ್ತರು ಶ್ರೀ.ಬಿ.ಎಂ ತುಂಬೆ ಸಮಾರಂಭವನ್ನು ಉದ್ಘಾಟಿಸಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಸಲಹೆ ಸೂಚನೆ ನೀಡಿ ಶುಭ ಹಾರೈಸಿದರು.
ಕಬ್ ವಿಭಾಗದ ನಾಯಕರಾದ ಎಮ್ ರಾಮ್ ರಾವ್ (ಲೀಡರ್ ಟ್ರೆöÊನರ್ ಕಬ್ ಮಾಸ್ಟರ್) ಹಾಗೂ ಬುಲ್ ಬುಲ್ ವಿಭಾಗದ ನಾಯಕಿ ಶ್ರೀಮತಿ ಸೇವಂತಿ (ಪ್ರಿ ಎಲ್‌ಟಿ ಪ್ಲಾಕ್ ಲೀಡರ್) ಮುಖ್ಯೋಪಾಧ್ಯಯರು ಮುಂಡತೋಡಿ ಪೆರ್ಲ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಇಲ್ಲಿನ ಮುಖ್ಯೋಪಾಧ್ಯಾಯರಾದ ಶ್ರೀಯುತ ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ವಿವಿಧ ಪರೀಕ್ಷೆ, ಚಟುವಟಿಕೆಗಳಲ್ಲಿ ಅತ್ಯಂತ ಉತ್ಸುಕತೆಯಿಂದ ಭಾಗವಹಿಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಿದರು.
ಕಬ್ ಮಾಸ್ಟರ್ ಶ್ರೀಮತಿ ಗೌತಮಿ ಕೆ ನಿರೂಪಿಸಿ, ಪ್ಲಾಕ್ ಲೀಡರ್ ಶ್ರೀಮತಿ ಚಿತ್ರಾ ಕೆ ಸ್ವಾಗತಿಸಿದರು ಮತ್ತು ಗೈಡ್ ಕ್ಯಾಪ್ಟನ್ ಶ್ರೀಮತಿ ಪದ್ಮಾವತಿ ಸಭಾ ಕಾರ್ಯಕ್ರಮದ ವಂದನಾರ್ಪಣೆ ಗೈದರು.

LEAVE A REPLY

Please enter your comment!
Please enter your name here