ಬಂಟ್ವಾಳ: ಇಲ್ಲಿನ ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾವಳಪಡೂರು ಗ್ರಾಮ ಪಂಚಾಯಿತಿ ಸದಸ್ಯ ವೀರೇಂದ್ರ ಅಮೀನ್ ಆಯ್ಕೆಯಾಗಿದ್ದಾರೆ.
ದೇವಳದ ಆಡಳಿತಾಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಅವಿರೋಧ ಆಯ್ಕೆಗೊಂಡರು.
ಪ್ರಧಾನ ಅರ್ಚಕರಾಗಿ ಮಿಥುನ್ ರಾಜ್ ನಾವಡ, ಸಮಿತಿ ಸದಸ್ಯರಾಗಿ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮಿ ಸಿ.ಬಂಗೇರ, ಎಂ.ಉದಯ ನಾಯಕ್, ಪ್ರೇಮನಾಥ, ಜನಾರ್ದನ ಆಚಾರ್ಯ, ದಯಾನಂದ ಶೆಟ್ಟಿ ಅಮೈ ಆಯ್ಕೆಯಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಬಾಲಕೃಷ್ಣ ಆಚಾರ್ಯ, ಪ್ರಭಾಕರ ಆಚಾರ್ಯ, ಬಾಲಕೃಷ್ಣ ಅಂಚನ್, ವಿಶ್ವನಾಥ ಪೂಜಾರಿ ಪೀರ್ಯಗುತ್ತು, ಸತೀಶ್ ಪಡಂತ್ರ‍್ಯಬೆಟ್ಟು, ರಾಜ್ ಪ್ರಸಾದ್ ಆರಿಗ, ಗೋಪಾಲ ಶೆಟ್ಟಿ ಕೆದ್ದಳಿಕೆ, ಕುಶಲ್ ಶೆಟ್ಟಿ ಕೆದ್ದಳಿಕೆ, ದಾಮೋದರ ಮನ್ಯಗುತ್ತು, ಉಮೇಶ್ ಪಡ್ಪು, ಲಿಂಗಪ್ಪ ಪೂಜಾರಿ ಕರ್ಮಾರ್, ದೇವಳದ ಮೆನೇಜರ್ ವಿನಯ ಕುಮಾರ್ ಮತ್ತಿತರರು ಇದ್ದರು.