ನಾರಾವಿ: ಕುತ್ತೂರು ಗ್ರಾಮದ ಪುರುಷರ ಗುಡ್ಡೆ ಬಳಿ ಕೊಕ್ರಾಡಿ-ನಾರಾವಿ ಸಾರ್ವಜನಿಕ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಧ್ಯರಾತ್ರಿ ಎ.12 ರಂದು ನಡೆದಿದೆ.
ಸುಮಾರು ರಾತ್ರಿ 12.15 ಕ್ಕೆ ಗಂಟೆಗೆ ಬೆಳ್ತಂಗಡಿ ತಾಲೂಕು ಕುತ್ತೂರು ಗ್ರಾಮದ ಪುರುಷ ಗುಡ್ಡ ಎಂಬಲ್ಲಿ ಕೊಕ್ರಾಡಿ -ನಾರಾವಿ ಸಾರ್ವಜನಿಕ ಡಾಮರು ರಸ್ತೆಯಲ್ಲಿ ಕೆ ಎ 19 ಇಪಿ 9677 ನೇ ಮೋಟಾರು ಸೈಕಲ್‌ನ್ನು ಅದರ ಸವಾರ ಪ್ರಶಾಂತ ರವರು ತಿರುವು ರಸ್ತೆಯಲ್ಲಿ ನಾರಾವಿ ಕಡೆಯಿಂದ ವೇಣೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು ಬಂದು ರಸ್ತೆಯ ಬಲ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಪ್ರಶಾಂತ್ ಮತ್ತು ಸಹ ಸವಾರ ದಿನೇಶ ರವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಕ್ಕೆ ಡಿಕ್ಕಿ ಹೊಡೆದ ಬೈಕ್- ಸ್ಥಳದಲ್ಲಿಯೇ ಇಬ್ಬರು ದುರ್ಮರಣ
RELATED ARTICLES