ಬಿಜೆಪಿ ಶಕ್ತಿ ಕೇಂದ್ರ ಧರ್ಮಸ್ಥಳ.ಅಭ್ಯಾಸವರ್ಗ.

0
104

ಧರ್ಮಸ್ಥಳ :ಧರ್ಮಸ್ಥಳ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ ನವೆಂಬರ್ 01 ರಂದು ನೆರವೇರಿತು. ಧರ್ಮಸ್ಥಳ ಬಿಜೆಪಿ ಹಿರಿಯ ಕಾರ್ಯಕರ್ತರಾಗಿರುವ ರಾಜೇಂದ್ರ ಅಜ್ರಿಯವರು ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿದರು.
ಬೆಳ್ತಂಗಡಿ ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀನಿವಾಸ್ ರಾವ್ ಉದ್ಘಾಟನಾ ಭಾಷಣ ಮಾಡಿದರು.
ನಮ್ಮ ವೈಚಾರಿಕತೆ ಮತ್ತು ಪಂಚ ಪರಿವರ್ತನೆ ವಿಷಯವನ್ನು ನಂದಕುಮಾರ್,ಬೂತ್ ಸಂಘಟನೆ ಮತ್ತು ಸ್ಥಳೀಯ ಆಡಳಿತದೊಂದಿಗೆ ನಮ್ಮ ಪಾತ್ರ ಈ ವಿಷಯವನ್ನು ಸೀತಾರಾಮ್ ಬೆಳಾಲು, ವಿಕಸಿತ ಭಾರತದ ಅಮೃತ ಕಾಲದಲ್ಲಿ ನಮ್ಮ ಸಕ್ರಿಯತೆ ವಿಷಯವನ್ನು ವೃಷಾಂಕ್ ಖಾಡಿಲ್ಕರ್ ಅರಸಿನಮಕ್ಕಿ ಬೈಠಕ್ ನೀಡಿದರು.
ಸಮಾರೋಪ ಅವಧಿಯಲ್ಲಿ ಸಿ ಎ ಬ್ಯಾಂಕ್ ಅಧ್ಯಕ್ಷರಾದ ಪ್ರೀತಮ್ ಡಿ. ಅವರು ಸ್ವಾಗತಿಸಿದರು.
ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಿದರು.ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಹೊಸ್ತೋಟ ಬೂತ್ ವರದಿ ಪಡೆದುಕೊಂಡರು. ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಉಪಸ್ಥಿತರಿದ್ದರು.ಶಕ್ತಿಕೇಂದ್ರ ಪ್ರಮುಖ್ ವಿಕ್ರಮ್ ಗೌಡ ಧನ್ಯವಾದ ಸಮರ್ಪಿಸಿದರು

ಬಿಜೆಪಿ ಗೀತೆ ಯೊಂದಿಗೆ ಸಂಪದ ಆರಂಭ ಆಗಿ ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here