“ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ”

0
20


ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರದಲ್ಲಿ ರುಡ್‌ಸೆಟ್ ಆಸರೆ ಸಂಘಟನೆ, ಮೊಗವೀರ ಯುವ ಸಂಘಟನೆ, ಉಡುಪಿ ಜಿಲ್ಲೆ ಉಪ್ಪೂರು ಘಟಕ ಮತ್ತು ವಿವಿಧ ಸಂಘ-ಸAಸ್ಥೆಗಳ ಅಡಿಯಲ್ಲಿ ಕೆ.ಎಂ.ಸಿ ರಕ್ತನಿಧಿ, ಮಣಿಪಾಲ ಇವರು ಸಾರಥ್ಯದಲ್ಲಿ ದಿನಾಂಕ 20-07-2026 ಸೋಮವಾರದಂದು “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ವನ್ನು ಸಂಸ್ಥೆಯ ಆವರಣದಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀ. ಗಂಗಾಧರ ಎಚ್.ಕೆ, ಮಹಾಪ್ರಭಂದಕರು, ಕೆನರಾ ಬ್ಯಾಂಕ್ ವೃತ್ತ, ಮಣಿಪಾಲ ಇವರು ರಕ್ತದಾನದ ಮಹತ್ವವನ್ನು ಮತ್ತು ರಕ್ತದಾನದಿಂದ ನಾವು ಸಮಾಜಕ್ಕೆ ಒಂದು ಕೊಡುಗೆ ನೀಡಿದ ಹಾಗೆ ಎಂದು ತಿಳಿಸಿದರು. ಹಾಗೂ ತಾವುಗಳು ಕೂಡ ಸುಮಾರು 53 ಬಾರಿ ರಕ್ತದಾನ ಮಾಡಿದ್ದಾರೆ ಎಂದು ಹೆಮ್ಮೆಯಿಂದ ತಿಳಿಸಿದರು. ಮತ್ತು ಪ್ರತಿಯೊಬ್ಬರು ಕೂಡ ರಕ್ತದಾನ ಮಾಡಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಶ್ರೀ ರವೀಶ್ ಎಸ್. ಕೊರವಡಿ ಜಿಲ್ಲಾಧ್ಯಕ್ಷರು, ಮೊಗವೀರ ಯುವ ಸಂಘಟನೆ, ಉಡುಪಿ ಜಿಲ್ಲೆ ಇವರು ರುಡ್‌ಸೆಟ್ ಸಂಸ್ಥೆಯ ಆವರಣದಲ್ಲಿ ನಮ್ಮೆಲ್ಲ ಸಂಘಟನೆಗಳು ಕೈಜೋಡಿಸಿ ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಸಂಸ್ಥೆಯ ಶಿಭಿರಾರ್ಥಿಗಳು ರಕ್ತದಾನ ಮಾಡುವುದರ ಮೂಲಕ ರಕ್ತದಾನ ಮಹಾದಾನ ಎಂಬ ಮಾತಿಗೆ ಅರ್ಥವನ್ನು ನೀಡಿದ್ದೀರಿ ಎಂದು ಶುಭಕೊರಿದರು.

ಅದೇ ರೀತಿಯಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ.ಬೊಮ್ಮಯ್ಯ ಎಂ. ಅವರು ಮಾತನಾಡಿ ಪ್ರತಿಯೊಬ್ಬ ಯೋಧನು ದೇಶದ ಗಡಿಯನ್ನು ಕಾಯುವ ಶಕ್ತಿಯಾಗಿದ್ದರೆ, ಪ್ರತಿಯೊಬ್ಬ ರಕ್ತದಾನಿಯು ಆರೋಗ್ಯಕರ ಸಮಾಜವನ್ನು ನಿರ್ಮೀಸುವ ಯೋಧರಾಗಿದ್ದಾರೆ ಎಂದು ತಿಳಿಸಿದರು. ಮತ್ತು ನಮ್ಮ ರುಡ್‌ಸೆಟ್ ಸಂಸ್ಥೆಯಲ್ಲಿ ಈ ಒಂದು ರಕ್ತದಾನ ಶಿಬಿರದಲ್ಲಿ ಸಾಕಷ್ಟು ಹಳೆಯ ಮತ್ತು ಪ್ರಸ್ತುತ ತರಬೇತಿ ಪಡೆಯುತ್ತಿರುವ ಶಿಭಿರಾರ್ಥಿಗಳು ರಕ್ತದಾನವನ್ನು ಮಾಡಿ ಶಿಬಿರವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಶ್ರೀ ಟಿ.ಎಸ್.ಎನ್ ಪೂರ್ಣಾನಂದ, ಸಹಾಯಕ ಮಹಾಪ್ರಬಂಧಕರು, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ-2,ಉಡುಪಿ ಇವರು ಕೋವಿಡ್-19 ಸಮಯದಲ್ಲಿ ಆದ ಘಟನೆಯನ್ನು ಸ್ವ-ಅನುಭವದ ಆಧಾರದಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿದರು. ಇನ್ನೂಳಿದಂತೆ ಶ್ರೀ ಹರೀಶ ಜಿ. ಮುಖ್ಯ ಪ್ರಬಂಧಕರು, ಜಿಲ್ಲಾ ಬ್ಯಾಂಕ್‌ಗಳ ಮಾರ್ಗದರ್ಶಿ ಕಛೇರಿ, ಕೆನರಾ ಬ್ಯಾಂಕ್, ಉಡುಪಿ, ಶ್ರೀ ಜಯಂತ್ ಅಮೀನ್ ಕೋಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷರು, ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ, ಶ್ರೀ ಶರತ್ ಕುಂದರ್, ಅಧ್ಯಕ್ಷರು, ಮೊಗವೀರ ಯುವ ಸಂಘಟನೆ(ರಿ), ಉಪ್ಪೂರು ಘಟಕ, ಶ್ರೀ ರಾಮಚಂದ್ರ ಆಚಾರ್, ಅಧ್ಯಕ್ಷರು, ರುಡ್‌ಸೆಟ್ ಆಸರೆ ಸಂಘಟನೆ, , ಬ್ರಹ್ಮಾವರ, ಶ್ರೀ ರಾಜೇಶ್ ದೇವಾಡಿಗ, ಗೌರವಾಧ್ಯಕ್ಷರು, ರುಡ್‌ಸೆಟ್ ಆಸರೆ ಸಂಘಟನೆ, ಬ್ರಹ್ಮಾವರ, ಡಾ. ಶಮ್ಮಿ ಶರ್ಮಾ, ಕೆ.ಎಂ.ಸಿ ರಕ್ತನಿಧಿ, ಮಣಿಪಾಲ ಎಲ್ಲ ಅತಿಥಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ. ಕೆ.ಸಿ ಅಮೀನ್, ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರುಡ್‌ಸೆಟ್ ಆಸರೆ ಸಂಘಟನೆ, ಬ್ರಹ್ಮಾವರ ಇವರು ಕಾರ್ಯಕ್ರಮದ ಪ್ರಸ್ತಾವಣೆಯನ್ನು ಸಲ್ಲಿಸಿದರು. ಶ್ರೀ. ವೆಂಕಟೇಶ್ ನಾಯಕ್, ಖಜಾಂಜಿ, ರುಡ್‌ಸೆಟ್ ಆಸರೆ ಸಂಘಟನೆ, ಬ್ರಹ್ಮಾವರ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು, ಶ್ರೀ. ಸಂತೋಷ ಶೆಟ್ಟಿ, ಉಪನ್ಯಾಸಕರು ರುಡ್‌ಸೆಟ್ ಸಂಸ್ಥೆ, ಬ್ರಹ್ಮಾವರ ಇವರು ಸ್ವಾಗತಿಸಿ, ಚೈತ್ರ ಕೆ. ಇವರು ಪ್ರಮಾಣ ಪತ್ರ ವಿತರಣೆಯನ್ನು ತಿಳಿಸಿದರು, ಕಛೇರಿ ಸಹಾಯಕರಾದ ಶಾಂತಪ್ಪ ಎನ್ ಧನ್ಯವಾದವನ್ನು ತಿಳಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ರುಡ್‌ಸೆಟ್ ಆಸರೆ ಸಂಘಟನೆ, ಬ್ರಹ್ಮಾವರ, ಮೊಗವೀರ ಯುವ ಸಂಘಟನೆ ಉಪ್ಪೂರು ಘಟಕ ಮತ್ತು ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು, ಕೆ.ಎಂ.ಸಿ ರಕ್ತನಿಧಿ, ಮಣಿಪಾಲ ಇದರ ಡಾಕ್ಟರ್‌ಗಳು ಮತ್ತು ರುಡ್‌ಸೆಟ್‌ಯ ಸಿಬ್ಬಂದಿಗಳು, ಅತಿಥಿ ಉಪನ್ಯಾಸಕರು ಹಾಗೂ ಸಂಸ್ಥೆಯ ಪ್ರಸ್ತುತ ಮತ್ತು ಹಳೆಯ ಸಿಬಿರಾರ್ಥಿಗಳು ಇದ್ದರು.