65 ಜನರಿದ್ದ ದೋಣಿ ಮುಳುಗಡೆ; 4 ಸಾವು, 29 ಮಂದಿ ನಾಪತ್ತೆ!

0
60

ಬಾಲಿ (ಇಂಡೋನೇಷ್ಯಾ): ಇಂಡೋನೇಷ್ಯಾದ ಪ್ರಸಿದ್ಧ ಪ್ರವಾಸಿ ನಗರವಾದ ಬಾಲಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಬುಧವಾರ ತಡರಾತ್ರಿ ‘ಕೆಎಂಪಿ ತುನು ಪ್ರತಮ ಜಯ’ ಎಂಬ ಪ್ರಯಾಣಿಕ ದೋಣಿ ಮುಳುಗಿದ್ದು, ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಬಾಲಿಯ ಗಿಲಿಮನುಕ್ ಬಂದರಿನ ಕಡೆಗೆ ದೋಣಿ ಹೊರಟಿತ್ತು ಎನ್ನಲಾಗಿದೆ.

ಇನ್ನು ದೋಣಿಯಲ್ಲಿ 53 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ ಒಟ್ಟು 65 ಜನರಿದ್ದರು. ಇದರೊಂದಿಗೆ 14 ಟ್ರಕ್‌ಗಳು ಸೇರಿದಂತೆ 22 ವಾಹನಗಳು ಸಹ ಇದ್ದವು. ಏತನ್ಮಧ್ಯೆ, ಇಲ್ಲಿಯವರೆಗೆ ನಾಲ್ಕು ಶವಗಳನ್ನು ಹೊರತೆಗೆಯಲಾಗಿದ್ದು, 32 ಜನರನ್ನು ರಕ್ಷಿಸಲಾಗಿದೆ, ಇನ್ನು ರಕ್ಷಿಸಿದ ಹಲವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅಪಘಾತದ ನಂತರ, ರಕ್ಷಣಾ ದೋಣಿಗಳು ಸೇರಿದಂತೆ ಒಂಬತ್ತು ದೋಣಿಗಳು ನಿರಂತರವಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, 29 ಜನರು ಇನ್ನೂ ಕಾಣೆಯಾಗಿದ್ದಾರೆ, ಅವರ ಸುರಕ್ಷತೆಗಾಗಿ ದೇಶಾದ್ಯಂತ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

LEAVE A REPLY

Please enter your comment!
Please enter your name here