ಶ್ರಾವಣ ಮಾಸದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆಗೆ ಆಹ್ವಾನ

0
60

ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆಗೆ ಆಹ್ವಾನಿಸಲಾಗಿದೆ ಎಂದು ಹಿರಿಯ ಕವಿಗಳು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕವನ ಬರೆಯುವ ಆಸಕ್ತರು 15 ರಿಂದ 20 ಸಾಲುಗಳಲ್ಲಿ ಶ್ರಾವಣದ ಕುರಿತು ಕವನ ರಚಿಸಿ ಕವನದ ಶೀರ್ಷಿಕೆ ನಿಮ್ಮ ಹೆಸರು ಮನೆಯ ಪೂರ್ಣ ಪ್ರಮಾಣದ ವಿಳಾಸ ಹಾಗೂ ವ್ಯಾಟ್ಸಪ್ ಸಂಖ್ಯೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ 31-7-2025 ರೊಳಗೆ ಕಳಿಸಬೇಕೆಂದು ತೀರ್ಪುಗಾರರಲ್ಲಿ ಒಬ್ಬರಾದ ಶ್ರೀಮತಿ ಶೈಲಾ ವಿನೋದ್ ದೇವರಾಜ್ ಪ್ರಕಟಿಸಿದ್ದಾರೆ.
ಯಾವುದೇ ಸಭೆ, ಸಮಾರಂಭವಿಲ್ಲದೇ ಸ್ಪರ್ಧಿಗಳು ಕೊಟ್ಟ ವ್ಯಾಟ್ಸಪ್ ಸಂಖ್ಯೆಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಫಲಿತಾಂಶ, ಅಭಿನಂದನಾ ಪತ್ರ ಕಳಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿ, ಹೆಚ್ಚಿನ ಮಾಹಿತಿಗೆ 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here