
ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಅವರಿಂದ ಯಕ್ಷಗಾನ ಬಯಲಾಟ ಸೇವೆ ಶಂಭೂರು ಗ್ರಾಮದ ಬೊಂಡಲ ಎಂಬಲ್ಲಿ ದಿನಾಂಕ 19-02-2026 ರಿಂದ 20-02-2026ರವರೆಗೆ ನಡೆಯಲಿದೆ.
ಪುಷ್ಪಲಂಕೃತವಾದ ಭವ್ಯ ರಂಗಮಂಟಪದಲ್ಲಿ 19-02-2026 ನೇ ಗುರುವಾರ ಸಂಜೆ 6-30ಕ್ಕೆ ಸಾರಿಯಾಗಿ ಕಲಿಕೀಚಕ ಹಾಗೂ 20-02-2026ನೇ ಶುಕ್ರವಾರ ಸಂಜೆ 6-30ಕ್ಕೆ ಶ್ರೀ ದೇವಿ ಮಹಾತ್ಮೆ ಎಂಬ ಕಥಾ ಭಾಗಗಳನ್ನು ಆಡಿ ತೋರಿಸಲಿರುವರು.
‘ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಸಂಸ್ಕರಣೆ ಹಾಗೂ ‘ಬೊಂಡಾಲ 2026 ಪ್ರಶಸ್ತಿಯನ್ನು , ಫೆ.20 ರಂದು ರಾತ್ರಿ 8-30ಕ್ಕೆ ಲಕ್ಷ್ಮಣ ತಾರೆಮಾರು ಕಟೀಲು ಮೇಳದ ಹಿರಿಯ ಕಲಾವಿದರು ಇವರಿಗೆ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
