ಪಡುಮಾರ್ನಾಡು: ಯುವ ವಾಹಿನಿ ಮೂಡುಬಿದಿರೆ ಘಟಕ ಮತ್ತು ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವತಿಯಿಂದ ಮೂಡುಮಾರ್ನಾಡು ಗ್ರಾಮದ ತಂಡ್ರಕೆರೆ ದ.ಕ.ಜಿ.ಪಂ. ಸರಕಾರಿ ಹಿ.ಪ್ರಾ. ಶಾಲೆಯ ಎಲ್ಲಾ 76 ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು. ಪುಸ್ತಕಗಳನ್ನು ವಿತರಿಸಿ ಮಾತನಾಡಿದ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನಿಯೋಜಿತ ಅಧ್ಯಕ್ಷ ಹರೀಶ್ ಎಂ.ಕೆ. ಅವರು ಮಾತನಾಡಿ ನಾವು ಕಲಿತ ಶಾಲೆಗೆ ಯಾವತ್ತೂ ಚಿರ ಋಣಿಗಳಾಗಿರಬೇಕು. ವೇದಿಕೆಯಲ್ಲಿರುವ ನಾವೆಲ್ಲರೂ ಸರಕಾರಿ ಶಾಲೆಯಲ್ಲೇ ಕಲಿತು ಇಂದು ದಾನಿಗಳಾಗಿ ನಿಮ್ಮೆದುರು ನಿಂತು ಮಾತನಾಡುವ ಶಕ್ತಿಯನ್ನು ಪಡೆದಿರುವುದು ನಿಮ್ಮ ಮುಂದಿನ ಸಾಧನೆಗೆ ಪ್ರೇರಣೆಯಾಗಲಿ ಎಂದರು.

ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಅವರು ಮಾತನಾಡಿ ಒಳ್ಳೆಯ ಹುದ್ದೆ, ಸ್ಥಾನಗಳಿಗೆ ಹೋದ ನಂತರ ನಾವು ಇಂತಹ ಶಾಲೆಗಳಿಂದ ದಾನಿಗಳಿಂದ ಪಡೆದಿರುವುದನ್ನು ಯಾವತ್ತೂ ಮರೆಯದೆ ಉತ್ತಮ ಹಳೆ ವಿದ್ಯಾರ್ಥಿಗಳಾಗಿಗಳಾಗಿ ಊರಿನ, ಶಾಲೆಯ ಏಳಿಗೆಗೆ ಕೊಡುಗೆಯನ್ನು ನೀಡುವ ಒಳಕೆಯತನ ಬೆಳೆಸಿಕೊಳ್ಳಬೇಕು ಎಂದರು. ಯುವವಾಹಿನಿ ಸಂಸ್ಥೆಯ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಅವರು ಮಾತನಾಡಿ ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ ಪರಿಸರದ ಹಲವು ಶಾಲೆಗಳ ಮಕ್ಕಳಿಗೆ ಪುಸ್ತಕ ಮತ್ತಿತರ ಸಾಮಗ್ರಿಗಳನ್ನು ನೀಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿದೆ ಎಂದರು. ರೋಟರಿ ಸಂಸ್ಥೆಯ ಪದಾಧಿಕಾರಿಯೂ ಆಗಿರುವ ಯುವವಾಹಿನಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಶಂಕರ ಎ. ಕೋಟ್ಯಾನ್ ಅವರು ಮಾತನಾಡಿ ನಮಗೆ ಹಿಂದೆ ಶಾಲೆಯಲ್ಲಿ ಪ್ಯಾಕೆಟ್ ಹುಡಿ ಆಹಾರ ಮಾತ್ರ ಸಿಗುತ್ತಿತ್ತು. ಭಾಗ್ಯವಂತರಾಗಿದ್ದು ಸರಕಾರದಿಂದ ಪೌಷ್ಟಿಕ ಆಹಾರವಾಗಿ ಆದರೆ ಇಂದಿನ ಮಕ್ಕಳು “ಮೊಟ್ಟೆ, ಸಂಘ ಸಂಸ್ಥೆಗಳಿಂದ ಪುಸ್ತಕ ರೂಪದ ಸಹಕಾರ ಎಲ್ಲವೂ ಸಿಗುತ್ತಿದೆ. ಇದನ್ನೆಲ್ಲಾ ಪಡೆದ ಮಕ್ಚಲು ಗುರು ಹಿರಿಯರಿಗೆ ಗೌರವ ನೀಡುತ್ತಾ ಲವಲವಿಕೆಯಿಂದ ಸಾಧನೆ ಮಾಡುವ ಹಾದಿಯಲ್ಲಿ ಸಾಗಬೇಕು ಎಂದರು. ರೋಟರಿ ಕ್ಲಬ್ ನಿಯೋಜಿತ ಕಾರ್ಯದರ್ಶಿ ಭರತ್ ಶೆಟ್ಟಿ, ಸಮುದಾಯ ಸೇವಾ ಸಭಾಪತಿ ಬಲರಾಮ ಕೆ. ಎಸ್.. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುಮಿತ್ರಾ, ಮಾಜಿ ಅಧ್ಯಕ್ಷ ಅಶೋಕ್ ಪೂಜಾರಿ. ಮಾಜಿ ಉಪಾಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಅರುಣಾ ಕುಮಾರಿ ಸ್ವಾಗತಿಸಿದರು. ಸಹಶಿಕ್ಷಕಿ ಶುಭಾ ನಿರೂಪಿಸಿದ ಕಾರ್ಯಕ್ರಮದಲ್ಲಿ ವೇದಮೂರ್ತಿ ಎಚ್.ಎನ್. ವಂದಿಸಿದರು.
