ಮೊಗೇರ ಸಂಘ ಆಲಂಕಾರು ಮಂಡಲದ ವತಿಯಿಂದ ಶೈಕ್ಷಣಿಕ ಮಾಹಿತಿ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮವು ಜೂನ್ 8 ಆದಿತ್ಯವಾರ ಆಲಂಕಾರು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಮೊಗೇರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಕೇಪುಳು ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಂಚಾಲಕರು ಹಾಗೂ ಉಳ್ಳಾಲ ಕಂದಾಯ ಇಲಾಖೆಯ ಉಪ ತಹಶೀಲ್ದಾರರಾದ ವಿಜಯ್ ವಿಕ್ರಂ ಗಾಂಧಿ ಪೇಟೆಯವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ , ಶುಭಹಾರೈಸಿದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಉಪನ್ಯಾಸಕರಾದ ಐತ್ತಪ್ಪ ಅಲೆಕ್ಕಾಡಿ ಮಾಡಿದರು. ಕಡಬ ಪೋಲಿಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರಾದ ಸಂಜೀವ ಶೆಟ್ಟಿ ಹಾಗೂ ಹೆಡ್ ಕಾನ್ ಸ್ಟೇಬಲ್ ಹರೀಶ್ ರವರು ಮತ್ತು ಮಹಿಳಾ ಪೋಲಿಸ್ ಕವಿತಾ ಬಿ ಇವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೋಲಿಸ್ ಇಲಾಖೆಯ ಬಗ್ಗೆ ಸಾರ್ವಜನಿಕ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಟ್ರಸ್ಟಿ ಡಾ. ರಘು ಬೆಳ್ಳಿಪ್ಪಾಡಿ , ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಸುಜಾತಾ ಏಕನಾಥ್ ಕೊಂಡಾಣ, ಉಪವಲಯ ಅರಣ್ಯಾಧಿಕಾರಿ ಗಳಾದ ರವಿಚಂದ್ರ ಪಡುಬೆಟ್ಟು, ಅಂಚೆ ಇಲಾಖೆ ನೌಕರರಾದ ಉಷಾ ಕೋಡಿ, ಮೊಗೇರ ಸಂಘದ ಗೌರವ ಸಲಹೆಗಾರರಾದ ಕರಿಯ ಗಾಣಂತಿ, ಬೂಡು ಬೆಳ್ಳಾರೆ ದೈವಸ್ಥಾನದ ವಿಜಯ್ ಪಾಟಾಜೆ , ಕಡಬ ಟೈಮ್ಸ್ ನ ಪ್ರಧಾನ ಸಂಪಾದಕರಾದ ವಿ ಕೆ ಕಡಬ, ಮುಂತಾದವರು ಭಾಗವಹಿಸಿ ಶುಭಹಾರೈಸಿದರು . 2025 ನೇ ಸಾಲಿನಲ್ಲಿ ಡಿಸ್ಟಿಂಕ್ಷನ್ ಪಡೆದ ಐದು ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ 180 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಿಸಲಾಯಿತು. ಮೊಗೇರ ಸಂಘದ ಶೀನಪ್ಪ ದೇರೋಡಿ ಸ್ವಾಗತಿಸಿದರು, ಮಹಾಬಲ ಪಡುಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಗಾಣಂತಿ ಧನ್ಯವಾದ ಸಮರ್ಪಿಸಿದರು. ಉಪಾಧ್ಯಕ್ಷರಾದ ತಾರಾನಾಥ ಕಡೀರಡ್ಕ ವಾರ್ಷಿಕ ವರದಿ ವಾಚಿಸಿದರು, ಕಾರ್ಯದರ್ಶಿ ಸಂದೀಪ್ ಪಾಂಜೋಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸುರೇಶ್ ತೋಟಂತಿಲ, ಜಗದೀಶ್ ಕೊಂಡಪ್ಪಾಡಿ, ಭಾರತಿ ಗಾಣಂತಿ, ಮಹಿಳಾ ಸಂಘದ ಅಧ್ಯಕ್ಷೆ ಅಕ್ಷತಾ ಕುಕ್ಕೆಜಾಲು, ಪೃಥ್ವಿ ದೇರೋಡಿ, ಪ್ರಜ್ವಲ್ ದೇರೋಡಿ, ಗೀತಾ ದೇರೋಡಿ, ಮಾಧವ ಖಂಡಿಗ, ಲೋಲಾಕ್ಷಿ ಮರುವಂತಿಲ, ಕಮಲ ಕಡೀರಡ್ಕ, ಲಲಿತಾ ಪುರುಷ ಬೆಟ್ಟು, ಗಿರಿಯಪ್ಪ ಕುಕ್ಕೆಜಾಲ್ , ಮೋನಪ್ಪ ಕೊನೆಮಜಲು, ಮತ್ತು ಇತರರು ವ್ಯವಸ್ಥೆಯಲ್ಲಿ ಸಹಕರಿಸಿದರು. ಲೋಕೇಶ್ ಕಲ್ಲೇರಿ, ಸುಂದರ ಕಳಾರ, ಚಿದಾನಂದ ಕಳಾರ, ಗಿರಿಜಾ ಕಕ್ಕೆನಡ್ಕ ಇವರುಗಳು ಹೊಸತಾಗಿ ಮೊಗೇರ ಸಂಘದ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.
ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಭೀಮ್ ಆರ್ಮಿ ಏಕತಾ ಮಿಷನ್ ದ.ಕ ಜಿಲ್ಲಾ ಉಪಾಧ್ಯಕ್ಷರಾದ ರಾಘವ ಕಳಾರ ಇವರು ಮಾಡಿಸಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕಿ ನೀಲಮ್ಮ ಪಟ್ಟೆ ,ಸುರೇಖಾ ಎಚ್ ಸಹಾಯಕ ಪ್ರಾಧ್ಯಾಪಕಿ ಸುಳ್ಯ ಪದವಿ ಕಾಲೇಜು, ಸದಾನಂದ ಕಲ್ಪನೆ, ದೇವಕಿ ಚಿದಾನಂದ ಬುಡೋಳಿ ಇವರುಗಳು ವಿಶೇಷ ಸಹಕಾರ ನೀಡಿದರು.