ಖ್ಯಾತ ಪತ್ರಿಕೋದ್ಯಮಿ ಮತ್ತು ಕೈಗಾರಿಕೋದ್ಯಮಿ ದಿ. ವಿ.ಎಸ್. ಕುಡ್ವರ ಜನ್ಮ ದಿನಾಚರಣೆ ಮಂಗಳೂರು ಜೂನ್ 09

0
120

ಖ್ಯಾತ ಪತ್ರಿಕೋದ್ಯಮಿ ನವಭಾರತ ಕನ್ನಡ ದೈನಿಕ ಪತ್ರಿಕೆಯ ಸ್ಥಾಪನಾ ಸಂಪಾದಕ ಮತ್ತು ನಗರದ ಮರೋಳಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆನರಾ ವರ್ಕ್ಸ್ಶಾಪ್ ಕೈಗಾರಿಕಾ ಸಂಸ್ಥೆಯ ಸ್ಥಾಪನಾಧ್ಯಕ್ಷ ದಿ. ವಿ. ಎಸ್. ಕುಡ್ವರ ೧೨೬ನೇ ವಾರ್ಷಿಕ ಜನ್ಮ ದಿನಾಚರಣೆ (ಸಂಸ್ಥಾಪಕರ ದಿನಾಚರಣೆ) ಯನ್ನು ತಾ: ೦೯.೦೬.೨೦೨೫ ರಂದು ಅವರು ಸ್ಥಾಪಿಸಿದ ಕೆನರಾ ವರ್ಕ್ಶಾಪ್ ಸಂಸ್ಥೆಯ ಕೈಗಾರಿಕಾ ಸಂಕೀರ್ಣದಲ್ಲಿ ಸಂಸ್ಥೆಯ ಅದ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರೇಮನಾಥ ಕುಡ್ವರ ಅಧ್ಯಕ್ಷತೆಯಲ್ಲಿ ಜರಗಿತು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ಥಾಪಕ
ರ ಆಡಳಿತ ಕ ್ಷಮತೆ, ಕಾರ್ಯದಕ್ಷತೆ, ಕಾರ್ಯನಿರ್ವಾಹಣೆ, ಕರ್ತವ್ಯ ನಿಷ್ಠೆ ಮತ್ತು ಸಮಯ ಪಾಲನೆ ಮತ್ತು
ಪತ್ರಿಕೋಧ್ಯಮ (ನವಭಾರತ ಕನ್ನಡ ದೈನಿಕ ಪತ್ರಿಕೆ) ಮತ್ತು ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಸಾಧಿಸಿದ
ಗಣನೀಯ ಸಾಧನೆಯನ್ನು ಸ್ಮರಿಸಿದರು. ಅವರ ಆದರ್ಶ, ದೂರದರ್ಶಿತ್ವ, ಸ್ಪೂರ್ತಿ, ನಮ್ಮ ಸಂಸ್ಥೆಗೆ
ಇಂದಿಗೂ ಮಾರ್ಗದರ್ಶನ ಹಾಗೂ ನಮ್ಮ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರೇರಣೆ ಮತ್ತು ದಾರಿದೀಪವಾಗಿದೆ
ಎಂದು ನುಡಿದು ದಿ. ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಸಂಸ್ಥಾಪಕರಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿವೃತ್ತ ಉಪಮಹಾಪ್ರಭಂದಕರಾದ ಅಬ್ದುಲ್ ಸಲೀಂ ಅವರು ಮುಖ್ಯ
ಅತಿಥಿಯಾಗಿ ಪಾಲ್ಗೊಂಡು ಸಂಸ್ಥೆಯು ಕಳೆದ ೮ ದಶಕಗಳಿಂದ ಬೆಳೆದು ಬಂದ ದಾರಿಯ ವಿವರ ನೀಡಿ
ಸಂಸ್ಥಾಪಕರಾದ ದಿ. ವಿ.ಎಸ್. ಕುಡ್ವರವರು ಕೈಗಾರಿಕೋದ್ಯಮದಲ್ಲಿ ಯೋಜನೆ, ಸಾಧನೆ, ಧ್ಯೇಯ ಮತ್ತು
ದೂರದರ್ಶಿತ್ವದ ವಿವರ ನೀಡಿ ಉದ್ಯಮದಲ್ಲಿ ಯಶಸ್ಸು ಸಾಧಿಸಿದನ್ನು ಸ್ಮರಿಸಿದರು. ದಿ. ವಿ.ಎಸ್. ಕುಡ್ವರ
ಜೀವನ ಚರಿತ್ರೆ ಕೃತಿಯ ಲೇಖಕ ವಸಂತ ಮಲ್ಯರು ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದರು.

ಸಿಬ್ಬಂದಿಗಳ ಪರವಾಗಿ ಅಕ್ಷಯ್‌ ಪ್ರಭು ಸಹಾಯಕ ಮಹಾಪ್ರಭಂದಕರು, ಉದ್ಯಮಿ ಗುರುಪ್ರಸಾದ್, ಹಿರಿಯ
ಸಿಬ್ಬಂದಿಗಳಾದ ಮನೋಹರ್ ಕಿಣಿ, ಗಣೇಶ್ ಕಾಮತ್, ಹಿರಿಯ ಕಾರ್ಮಿಕರಾದ ಸುರೇಶ್ ಸಾಲಿಯಾನ್
ಮತ್ತು ಜಯಂತ್ ಬಂಗೇರಾ, ಕಾರ್ಮಿಕರ ಸಂಘದ ಪರವಾಗಿ ಶರತ್, ರವೀಂದ್ರ, ಭಾಸ್ಕರ್ ಆಚಾರ್ಯ
ಸಂಸ್ಥಾಪಕರ ಪುತ್ಥಳಿಗೆ ಹಾರಾರ್ಪಣೆ ಮಾಡಿ ತಮ್ಮ ಗೌರವ ಸಲ್ಲಿಸಿದರು. ಸಂಸ್ಥೆಯ ಮಹಿಳಾ ಅಧಿಕಾರಿ
ಶ್ರೀಮತಿ ಕಿರಣ್ ಎಸ್. ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿನಾಯಕ್ ಕಿಣಿ
ವಂದಿಸಿದರು.

LEAVE A REPLY

Please enter your comment!
Please enter your name here