ಬನ್ನಾಡಿಯಲ್ಲಿ ನ.27ರಂದು ಬ್ರಹ್ಮಬೈದರ್ಕಳ ಕಂಬಳ ಮಹೋತ್ಸವ

0
9

ಬನ್ನಾಡಿ : ಇಲ್ಲಿನ ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಬನ್ನಾಡಿ ಬ್ರಹ್ಮಬೈದರ್ಕಳ ಕಂಬಳ ಮಹೋತ್ಸವವು ನವೆಂಬರ್ 29ರ ಭಾನುವಾರ ದಂದು ನಡೆಯಲಿದೆ.
ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಬೆಳಿಗ್ಗೆ 9.30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಂಬಳ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ ಕಂಬಳದ ಕೋಣಗಳನ್ನು ಓಡಿಸುವ ಮೂಲಕ ಸಾಂಪ್ರದಾಯಿಕ ಕಂಬಳ ಕ್ರೀಡೆಗೆ ಚಾಲನೆ ನೀಡಲಾಗುವುದು.

ಬನ್ನಾಡಿ ಕಂಬಳಗದ್ದೆಯ ಮನೆಯವರು, ಬ್ರಹ್ಮಬೈದರ್ಕಳ ಸಾಂಪ್ರದಾಯಿಕ ಕಂಬಳ ಸಮಿತಿ, ಬನ್ನಾಡಿ ನಾಲ್ಕು ಮನೆಯವರ ನೇತೃತ್ವದಲ್ಲಿ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದಲ್ಲಿ ಮಹೋತ್ಸವ ಆಯೋಜಿಸಲಾಗಿದೆ.

ಕಂಬಳಾಭಿಮಾನಿಗಳು, ಕ್ರೀಡಾಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ವಿನಂತಿಸಿದ್ದಾರೆ.