ಬ್ರಹ್ಮಾವರ: ಮಹಿಳೆಯರಿಗೆ ಕೃತಕ ಆಭರಣ ತರಬೇತಿ ಸಮಾರೋಪ ಕಾರ್ಯಕ್ರಮ

0
168

ಕನಸಿನ ಬೆನ್ನತ್ತಿ : ಸುಬ್ರಹ್ಮಣ್ಯ ಎಂ. ರಾವ್, ನಿವೃತ್ತ ಶಿಕ್ಷಕರು, ಮುನಿಯಾಲು

ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಆಶ್ರಯದಲ್ಲಿ ನಡೆದ ಮಹಿಳೆಯರ ಕೃತಕ ಆಭರಣ ತಯಾರಿಕೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಶಿಕ್ಷಕರು ಸುಬ್ರಹ್ಮಣ್ಯ ಎಂ. ರಾವ್ ಶಿಬಿರಾರ್ಥಿಗಳಿಗೆ ಉತ್ಸಾಹದ ಸಂದೇಶ ನೀಡಿದರು. ಅವರು ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ವಿಭಿನ್ನ ಕಲೆ ಮತ್ತು ಯೋಚಿಸುವ ಸಾಮರ್ಥ್ಯವಿದ್ದು, ಅದನ್ನು ಅರಿತು ಸಾಧನೆಯ ಮಾರ್ಗವನ್ನು ತೋರಿಕೊಳ್ಳುವುದು ಅತ್ಯವಶ್ಯಕವೆಂದು ಹೇಳಿದರು. “ಹೊಸದಾಗಿ ಯೋಚಿಸಿ, ಹೊಸತನಕ್ಕೆ ಪ್ರೋತ್ಸಾಹ ನೀಡಿ, ಹಾಗೂ ನಿಮ್ಮ ಕನಸುಗಳನ್ನು ಬೆನ್ನತ್ತಿ, ಸಮಾಜದಲ್ಲಿ ಯಶಸ್ವಿ ಉದ್ಯಮಿಗಳಾಗಿ ಬೆಳೆಯಿರಿ” ಎಂದು ಶಿಬಿರಾರ್ಥಿಗಳಿಗೆ ಹಾರೈಸಿದರು.

ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಶಿಬಿರಾರ್ಥಿಗಳನ್ನು ಅಭಿನಂದಿಸಿ, ತಳಮಟ್ಟದ ತರಬೇತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಶ್ಲಾಘಿಸಿದರು. ಅವರು ಶಿಬಿರಾರ್ಥಿಗಳಿಗೆ ತನ್ನ ಆಸಕ್ತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಮಾಡಲು ಮತ್ತು ಸಂಸ್ಥೆಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಪ್ರೋತ್ಸಾಹಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ತರಬೇತಿಗಳನ್ನು ಸಂಸ್ಥೆ ಆಯೋಜಿಸುತ್ತಿದ್ದು, ಅದರ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲು ಶಿಬಿರಾರ್ಥಿಗಳನ್ನು ಮನವಿ ಮಾಡಿದರು.

ಕಾರ್ಯಕ್ರಮವನ್ನು ಕಛೇರಿ ಸಹಾಯಕ ಚೈತ್ರ. ಕೆ ನಿರೂಪಿಸಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ಸಂತೋಷ್ ಶೆಟ್ಟಿ ಕಾರ್ಯಕ್ರಮವನ್ನು ವಂದಿಸಿದರು.

LEAVE A REPLY

Please enter your comment!
Please enter your name here