ಬಂಟರ ಸಂಘ ಕಾವೂರು: ಆಟಿಡೊಂಜಿ ದಿನ ಸಮಾರಂಭ

0
21

ಹಿರಿಯರ ಜೀವನ ಪದ್ಧತಿ, ಸಂಸ್ಕೃತಿ, ಸಂಪ್ರದಾಯ ಇಂದಿನ ಯುವಪೀಳಿಗೆ ಉಳಿಸಿ ಬೆಳೆಸಬೇಕಾಗಿದೆ: ಅರ್ಪಿತಾ ಪ್ರಶಾಂತ್ ಶೆಟ್ಟಿ

ಮಂಗಳೂರು: ಹಿರಿಯರ ಜೀವನ ಪದ್ಧತಿ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ, ಆರೋಗ್ಯ ಕಾಳಜಿ, ಪಕೃತಿ ಪೇಮ ಇದನ್ನು ಇಂದಿನ ಯುವಪೀಳಿಗೆ ಉಳಿಸಿ ಬೆಳೆಸಬೇಕಾಗಿದೆ ಎಂದು ಶ್ರೀಮತಿ ಅರ್ಪಿತಾ ಪ್ರಶಾಂತ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರು ಉಡುಪಿ ಇವರು ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಬಂಟರ ಮಹಿಳಾ ವಿಭಾಗ ವತಿಯಿಂದ ನಡೆದ ಆಟಿಡೊಂಜಿ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದಿನ ಕಾಲದಲ್ಲಿ ನಮ್ಮ ಹಿರಿಯರು ಕುಟುಂಬದ ನಿರ್ವಹಣೆಯಲ್ಲಿ ಅತ್ಯಂತ ಜಾಣಾಕ್ಷರಾಗಿದ್ದು, ಮಳೆಗಾಲದಲ್ಲಿ ಅಗತ್ಯವಿರುವ ಪ್ರತಿಯೊಂದು ವಸ್ತುವನ್ನು ಮುಂಗಡವಾಗಿ ಸಂಗ್ರಹಿಸಿ ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದರು ಎಂದ ಅವರು ಅಂದಿನ ಆಹಾರ ಪದ್ಧತಿಯಿಂದ ದೀರ್ಘ ಆಯುಷ್ಯರಾಗಿ ಬಾಳಿದ್ದರು ಎಂದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಧು ಕನ್‌ಸ್ಟ್ರಕ್ಷನ್‌ನ ವಿಜಯಲಕ್ಷ್ಮೀ ಎಂ. మల్లి మాశనాది కుళునాడిన సంసృతి, సంప్రదాయ కుళం బిళే కువల్లి మపిళయ వాత్ర ಶ್ಲಾಘನೀಯ, ಹಿರಿಯರ ಜೀವನ ಜ್ಞಾನವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗುವುದು ಎಂದರು. ಆಟಿಡೊಂಜಿ ಕೂಟ ಸಮಾರಂಭವನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ಉದ್ಘಾಟಿಸಿ ಚಾಲನೆ ನೀಡಿದರು. ಸನ್ಮಾನ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ: ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಂಸ್ಥೆಯಾದ ವಿಷಿಯಾ ಇಂಟೆಕ್ ನ್ಯಾಷನಲ್ ಇದರ ವತಿಯಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀಮತಿ ಸುಖಲತಾ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಿನ್ನದ ಮಣೆ ಸಹಿತ ತುಳುವರ ಗೊಬ್ಬುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆರೋಗ್ಯ ಪದ್ಧತಿಯ ಹಿಂದಿನ ಕಾಲದ ಊಟೋಪಚಾರಗಳು ನಡೆಯಿತು. ಶ್ರೀಮತಿ ಹರುಷ ಎಸ್. ಶೆಟ್ಟಿ ಮತ್ತು ಹರಿಣೆ ಭಂಡಾರಿ ಪಾರ್ಥನೆ ಗೈದರು. ಸುಜಯ ಎಸ್. ಶೆಟ್ಟಿ ಸ್ವಾಗತಿಸಿ, ರೇಖಾ ವಿ. ಶೆಟ್ಟಿ ಧನ್ಯವಾದ ಗೈದರು. ಗೀತಾ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.