Wednesday, April 23, 2025
HomeUncategorizedಬೈಂದೂರು: ಅಂಡರ್ 19 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ವಿಕ್ರಂ ಟೋಪಿ 2025

ಬೈಂದೂರು: ಅಂಡರ್ 19 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ವಿಕ್ರಂ ಟೋಪಿ 2025

ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಇವರ ಸಹಭಾಗಿತ್ವದೊಂದಿಗೆ ದಿನಾಂಕ 21 ರಿಂದ 27 ಏಪ್ರಿಲ್ 2025 ವರೆಗೆ ಅಂಡರ್ 19 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟ ವಿಕ್ರಂ ಟೋಪಿ 2025 ಗಾಂಧಿ ಮೈದಾನ ಬೈಂದೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ

1975ರಲ್ಲಿ ಆರಂಭಗೊಂಡ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ಮೊದಲು ಲೆದರ್ ಬಾಲ್ ಕ್ರಿಕೆಟ್ ಆಟವಾಡಿ ನಂತರದ ದಿನಗಳಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಟವನ್ನು ಮೆಚ್ಚಿಕೊಂಡು ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಗದು ಬಹುಮಾನವನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟವನ್ನು ಬೈಂದೂರಿನಲ್ಲಿ ಆಯೋಜಿಸಿದ ಹಿರಿಮೆ ಹೊಂದಿದೆ. ತದನಂತರ ತಂಡವು ಕೂಡ ಹಲವಾರು ತಾಲೂಕು ಮಟ್ಟದ, ಜಿಲ್ಲಾಮಟ್ಟದ, ಅಂತರ್‌ಜಿಲ್ಲಾ ಮಟ್ಟದ, ಮತ್ತು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಹತ್ತು ಹಲವು ಪಾರಿತೋಷಕಗಳನ್ನು ಪಡೆದ ಜಿಲ್ಲೆಯ ಕೆಲವೇ ತಂಡಗಳಲ್ಲಿ ವಿಕ್ರಂ ಕ್ರಿಕೆಟ್ ಕ್ಲಬ್ ಕೂಡ ಒಂದು.ಬೈಂದೂರಿನಲ್ಲಿ ಹಲವಾರು ಬಾರಿ ಜಿಲ್ಲಾ ಮಟ್ಟದ, ರಾಜ್ಯಮಟ್ಟದ 60 ಗಜಗಳ ಕ್ರಿಕೆಟ್ ಪಂದ್ಯಾಟವನ್ನು ಅತ್ಯಂತ ಶಿಸ್ತು ಬದ್ಧವಾಗಿ ಆಯೋಜಿಸಿದೆ. ಇದರ ಜೊತೆಯಲ್ಲಿ ಅನೇಕ ಸಮಾಜ ಸೇವಾ ಕಾರ್ಯಗಳಲ್ಲೂ ಸಂಸ್ಥೆ ಗುರುತಿಸಿಕೊಂಡಿದೆ.
ಇದೀಗ ವಿಕ್ರಂ ಕ್ರಿಕೆಟ್ ಕ್ಲಬ್‌ನ ಆಶ್ರಯದಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿಯನ್ನು ಕಳೆದೆರಡು ವರ್ಷಗಳಿಂದ ಬೇಸಿಗೆ ಶಿಬಿರ ಹಾಗೂ ವರ್ಷಾವಧಿ ಶಿಬಿರಗಳ ಮೂಲಕ ಈ ಭಾಗದ ಹಲವಾರು ಯುವ ಆಟಗಾರರನ್ನು ಹುಟ್ಟುಹಾಕುತ್ತಿದೆ. ಇದಕ್ಕೆ ಪೂರಕವಾಗಿ ಎಪ್ರಿಲ್ 21ರಿಂದ 27ರ ತನಕ ಬೈಂದೂರು ಗಾಂಧಿ ಮೈದಾನದಲ್ಲಿ ಬೈಂದೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಂಡರ್ ನೈಂಟೀನ್ (19 ವರ್ಷದ ಕೆಳಗಿನವರ) ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ವಿಕ್ರಂ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ದಿನೇಶ್ ಗಾಣಿಗ, ಗೌರವಾಧ್ಯಕ್ಷರಾದ ಗಿರೀಶ್ ಬೈಂದೂರು ನಾಗರಾಜ್ ಶೆಟ್ಟಿ, ಉಪಾಧ್ಯಕ್ಷರಾದ ಕೆ ನಾರಾಯಣ, ಗೌರವ ಸಲಹೆಗಾರರಾದ ಜಯಾನಂದ ಹೋಬಳಿದಾರ್, ಕಾರ್ಯದರ್ಶಿ ರಾಜೇಶ್ ಆಚಾರ್, ಖಜಾಂಚಿ ಸುನಿಲ್ ಬೈಂದೂರು, ಮತ್ತು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಿಕ್ರಂ ಕ್ರಿಕೆಟ್ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು

ಗಣೇಶ್ ಪರಮಾನಂದ ನಿರೂಪಿಸಿ ವಂದಿಸಿದರು.

RELATED ARTICLES
- Advertisment -
Google search engine

Most Popular