ಉದ್ಯಮ- ಸರ್ಕಾರ ಸಮನ್ವಯಕ್ಕೆ ಕರೆ

0
4

ಮಂಗಳೂರು : ಭಾರತದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಹಾಗೂ ಖಾಸಗಿ ವಲಯದ ನಡುವೆ ಹೆಚ್ಚಿನ ಸಹಯೋಗವಿರಬೇಕು ಎಂದು ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ಕರೆ ನೀಡಿದ್ದಾರೆ.

ಎಫ್‍ಕೆಸಿಸಿಐ ಕಾರ್ಯಕ್ರಮದಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಕುರಿತು ಅವರು ಇತ್ತೀಚಿನ ಸಾಮಾಜಿಕ ಮಾಧ್ಯಮ ಪೆÇೀಸ್ಟ್‍ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳು, ಇಂಧನ, ಉತ್ಪಾದನೆ ಹಾಗೂ ಭಾರೀ ಕೈಗಾರಿಕಾ ವಲಯದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣಕ್ಕೆ ಅವರು ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಉತ್ಪಾದಕತೆ ಸುಧಾರಿಸಲು, ಉದ್ಯೋಗ ಸೃಷ್ಟಿಸಲು ಮತ್ತು ಎಂಎಸ್‍ಎಂಇಗಳ ಬೆಳವಣಿಗೆ ಉತ್ತೇಜಿಸಲು ಖಾಸಗಿ ವಲಯದ ನಿರ್ವಹಣೆಗಿರುವ ಸಾಮಥ್ರ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಉದ್ಯೋಗಿಗಳನ್ನು ವಜಾ ಮಾಡದಿರುವ ಷರತ್ತು ವಿಧಿಸಬೇಕು ಹಾಗೂ ಉದ್ಯೋಗಾವಕಾಶಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಬೇಕು ಎಂದು ವಿಶ್ಲೇಷಿಸಿದ್ದಾರೆ. ಕಾಪೆರ್Çರೇಟ್ ಸ್ವಾಧೀನಗಳಿಗೆ ಪರ್ಯಾಯವಾಗಿ ಸಾರ್ವಜನಿಕ ಷೇರು ವಿತರಣೆಯ ಮಹತ್ವವನ್ನೂ ಎತ್ತಿ ತೋರಿಸಿದ್ದು, ಖಾಸಗೀಕರಣದಿಂದ ಬರುವ ಆದಾಯವನ್ನು ಸರ್ಕಾರದ ಸಾಲ ಕಡಿಮೆ ಮಾಡಲು ಮತ್ತು ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ಬಳಸಬಹುದು ಎಂದು ತಿಳಿಸಿದ್ದಾರೆ.

ಖನಿಜಗಳು, ಲೋಹಗಳು ಮತ್ತು ಹೈಡ್ರೋಕಾರ್ಬನ್ ವಲಯಗಳಲ್ಲಿನ ಅನ್ವೇಷಣೆಯು ಯುವ ಉದ್ಯಮಿಗಳು ಹಾಗೂ ಸ್ಟಾರ್ಟ್ ಅಪ್ ಗಳಿಗೆ ಮಹತ್ವದ ಅವಕಾಶವಾಗಿದೆ ಎಂದು ಅಗರ್ವಾಲ್ ಒತ್ತಿ ಹೇಳಿದ್ದಾರೆ.

ತಮ್ಮ ಪೆÇೀಸ್ಟ್‍ನ ಕೊನೆಯಲ್ಲಿ, ಖಾಸಗೀಕರಣ, ಸ್ವಯಂ-ಪ್ರಮಾಣೀಕರಣ ಮತ್ತು ಅನ್ವೇಷಣೆಯ ಸುತ್ತ ರಾಷ್ಟ್ರೀಯ ಆಂದೋಲನ ನಿರ್ಮಿಸಲು ಉದ್ಯಮ, ಸರ್ಕಾರ ಮತ್ತು ನಾಗರಿಕರು ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ. ಆಹಾರ ಸ್ವಾವಲಂಬನೆ ಸಾಧಿಸುವಲ್ಲಿ ಜೈ ಜವಾನ್ ಜೈ ಕಿಸಾನ್ ಆಂದೋಲನದ ಯಶಸ್ಸಿಗೆ ಇದನ್ನು ಹೋಲಿಕೆ ಮಾಡಿರುವ ಅವರು, ಉದ್ಯೋಗ ಸೃಷ್ಟಿಸಲು, ಆದಾಯ ಹೆಚ್ಚಿಸಲು ಮತ್ತು ಭಾರತೀಯ ರೂಪಾಯಿಯನ್ನು ಬಲಪಡಿಸಲು ಅಂತಹದ್ದೇ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.