ಚೇತನಾ ವಿಶೇಷ ಶಾಲೆಯಲ್ಲಿ ಕೆನರಾ ಬ್ಯಾಂಕ್ ಆಫಿರ‍್ಸ್ ಅಸೋಸಿಯೇಷನ್ ವತಿಯಿಂದ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ

0
40


ಕೆನರಾ ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಅವರ ೧೭೩ನೇ ಜನ್ಮದಿನಾಚರಣೆಯನ್ನು ಕೆನರಾ ಬ್ಯಾಂಕ್ ಆಫಿರ‍್ಸ್ ಅಸೋಸಿಯೇಷನ್ ಉಡುಪಿ ವತಿಯಿಂದ ದಿನಾಂಕ ೧೯.೧೧.೨೦೨೫ರಂದು ಚೇತನಾ ವಿಶೇಷ ಶಾಲೆಯಲ್ಲಿ ಉಡುಪಿ ಪ್ರಾದೇಶಿಕ ವಲಯದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಟಿ.ಎಸ್.ಎನ್ ಪೂರ್ಣಾನಂದ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಅವರ ದೂರದೃಷ್ಟಿ ಯೋಜನೆಯಿಂದಾಗಿ ಜನ ಸಾಮಾನ್ಯರಿಗೆ ಬ್ಯಾಂಕ್ ವ್ಯವಹಾರಗಳು ಮುಟ್ಟುವ ರೀತಿಯಲ್ಲಿ ಕಾರ್ಯ ಯೋಜನೆಯನ್ನು ಹಮ್ಮಿಕೊಂಡ ಪ್ರಯತ್ನದಿಂದ ಕೆನರಾ ಬ್ಯಾಂಕ್ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. ಇಂತಹ ಕಾರ್ಯಕ್ರಮವನ್ನು ಕಾರ್ಕಳದಲ್ಲಿ ವಿಶೇಷ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಚೇತನಾ ವಿಶೇಷ ಶಾಲೆಯಲ್ಲಿ ಆಚರಿಸುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತದೆ. ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಆಫಿರ‍್ಸ್ ಅಸೋಸಿಯೇಷನ್ ಉಡುಪಿ ವತಿಯಿಂದ ಶಾಲೆಯ ಅವಶ್ಯಕ ಬೇಡಿಕೆಯಾದ ಪ್ಲಾಸ್ಟಿಕ್ ಚೇರ್ಗಳನ್ನು ಸಂಸ್ಥೆಗೆ ಹಸ್ತಾಂತರಿಸಿದರು. ಪ್ರಭಾಕರ್ ಶೆಟ್ಟಿ, ಆಫಿರ‍್ಸ್ ಅಸೋಸಿಯೇಷನ್‌ನ ರೀಜನಲ್ ಸೆಕ್ರೆಟರಿ ಮತ್ತು ವಿಜೇಶ್ ಕುಮಾರ್, ಚೀಫ್ ಮ್ಯಾನೇಜರ್ ಕಾರ್ಕಳ ಶಾಖೆ ಸಂರ್ದಭೋಚಿತವಾಗಿ ಮಾತನಾಡಿ ವಿಶೇಷ ಮಕ್ಕಳ ಕಾಳಜಿ ವಹಿಸುವ ಚೇತನಾ ವಿಶೇಷ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಗೆ ನೀಡಿದ ಸಹಕಾರಕ್ಕೆ ಭಾರತೀ ಸೇವಾ ಮಂಡಳಿ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಶೆಟ್ಟಿಯವರು ಕೆನರಾ ಬ್ಯಾಂಕ್ ಆಫಿರ‍್ಸ್ ಅಸೋಸಿಯೇಷನ್, ಉಡುಪಿ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಟ್ರಸ್ಟಿನ ಕೋಶಾಧಿಕಾರಿ ಕೆ. ವಿಜಯ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಫಿರ‍್ಸ್ ಅಸೋಸಿಯೇಷನ್‌ನ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಿಕ್ಷಕಿ ಶ್ರೀಮತಿ ಮಂಜುಳಾ ಇವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವನ್ನು ಕೋರಿದರು.

LEAVE A REPLY

Please enter your comment!
Please enter your name here