ಕೆನರಾ ಟ್ರೋಫಿ–2026: ಬೆಂಗಳೂರಿನಲ್ಲಿ ತುಳುನಾಡಿನ ಕ್ರಿಕೆಟ್ ಸಂಭ್ರಮ

0
17

ಬೆಂಗಳೂರು : ತುಳುನಾಡಿನ ಕ್ರಿಕೆಟ್ ಪ್ರತಿಭೆಗಳಿಗೆಗಾಗಿ ಕೆನರಾ ಅಸೋಸಿಯೇಷನ್(ರಿ ), ಇಲೆಕ್ಟ್ರಾನಿಕ್ ಸಿಟಿ, ಬೆಂಗಳೂರು ಆಶ್ರಯದಲ್ಲಿ ಪ್ರಥಮ ಬಾರಿಗೆ “ಕೆನರಾ ಟ್ರೋಫಿ – 2026” ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಬೆಂಗಳೂರು ನಗರದ ನಾರಾಯಣ ಘಟ್ಟದಲ್ಲಿರುವ ಸಚಿನ್ ತೆಂಡೂಲ್ಕರ್ ಟರ್ಫ್ ಗ್ರೌಂಡ್ ನಲ್ಲಿ ನಡೆದ ಈ ಪಂದ್ಯಾಟದಲ್ಲಿ ತುಳುನಾಡಿನ 14 ಪ್ರತಿಷ್ಠಿತ ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಚಕ ಹಾಗೂ ಮನರಂಜನಾತ್ಮಕ ಪಂದ್ಯಗಳನ್ನು ನೀಡಿದವು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 4.30 ರವರೆಗೆ ನಡೆದ ಪಂದ್ಯಾವಳಿಯಲ್ಲಿ ಹಲವು ಪ್ರತಿಭಾವಂತ ಆಟಗಾರರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು.

ಕೆನರಾ ಅಸೋಸಿಯೇಷನ್ (ರಿ) ಅಧ್ಯಕ್ಷರಾದ ಸತೀಶ್ ಸುವರ್ಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಾ ಹಾರೈಸಿದರು. ಮುಂದಿನ ವರ್ಷಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ಕ್ರೀಡಾಭಿಮಾನಿಗಳಿಗೆ ಭರವಸೆಯನಿತ್ತರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತುಳುನಾಡಿನ ಪ್ರತಿಭೆ, ವೀಕ್ಷಕ ವಿವರಣೆಗಾರ ಸುಕುಮಾರ್ ಇವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷರಾದ ವಿಜಯ್ ಕುಲಾಲ್ ಎಂ ಸನ್ಮಾನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಸಂಘಟನಾ ಕಾರ್ಯದರ್ಶಿ ಯೋಗೀಶ್ ದೇರಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಠ್ಠಲ್ ಗೊಲ್ಲ, ಸುಭಾಶ್, ಮಮತಾ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಠಿಣ ಪೈಪೋಟಿಯ ಪಂದ್ಯಗಳು ಪ್ರೇಕ್ಷಕರನ್ನು ರಂಜಿಸಿದವು. ಕ್ರೀಡೆಯ ಮೂಲಕ ಒಗ್ಗಟ್ಟು, ಸ್ನೇಹ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಉದ್ದೇಶವನ್ನು ಈ ಪಂದ್ಯಾಟ ಯಶಸ್ವಿಯಾಗಿ ಸಾಕಾರಗೊಳಿಸಿತು.

ಪಂದ್ಯಾಟದ ಮತ್ತೊಂದು ವಿಶೇಷ ಆಕರ್ಷಣೆಯಾಗಿ “ಟೇಸ್ಟ್ ಆಫ್ ಮಂಗಳೂರು” ಹೋಟೆಲ್ ವತಿಯಿಂದ ತುಳುನಾಡಿನ ಸಾಂಪ್ರದಾಯಿಕ ವೆಜ್ ಹಾಗೂ ನಾನ್-ವೆಜ್ ಆಹಾರ ಪದಾರ್ಥಗಳು ಮತ್ತು ಪಾನೀಯಗಳ ವಿಶೇಷ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಆಟಗಾರರು ಹಾಗೂ ಪ್ರೇಕ್ಷಕರು ಸ್ಥಳೀಯ ಸಾಂಪ್ರದಾಯಿಕ ಆಹಾರದ ಸವಿಯನ್ನು ಆಸ್ವಾದಿಸಿದರು.

ವಾವ್ ಮಂಗಳೂರು ತಂಡ ಪ್ರಥಮ ಕೆನರಾ ಟ್ರೋಫಿಯನ್ನು ತನ್ನ ಮುಡಿಗೆರಿಸಿಕೊಂಡಿತ್ತು. ದ್ವಿತೀಯ ಸ್ಥಾನವನ್ನು ಕೋಸ್ಟಲ್ ಕ್ರಿಕೆಟರ್ಸ್ ಪಡೆದು ಕೊಂಡಿತ್ತು. ತ್ರತಿಯ ಸ್ಥಾನ ವೈಯಲ್ ಕಾವಲ್ ಬಾಯ್ಸ್, ಹಾಗೂ ನಾಲ್ಕನೇ ಸ್ಥಾನ ಬಾಲಾಜಿ ಸ್ಟ್ರೈಕರ್ಸ್ ತನ್ನದಾಗಿಸಿತು.

ಉತ್ತಮ ಎಸೆತಗಾರ ಪ್ರಶಸ್ತಿ ಯನ್ನು ಧನುಷ್ ಹೆಗ್ಡೆ ಪಡೆದುಕೊಂಡರೆ, ಉತ್ತಮ ಬ್ಯಾಟ್ಸಮನ್ ಪ್ರಶಸ್ತಿಯನ್ನು ಮಾಜ್ಹಾರ್ ಪಡೆದುಕೊಂಡರು. ಪಂದ್ಯಕೂಟದ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡ ಧನುಷ್ ಹೆಗ್ಡೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕೆನರಾ ಅಸೋಸಿಯೇಷನ್ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು ಹಾಗೂ ವಿವಿಧ ಗಣ್ಯರು ಪಂದ್ಯಾಟದಲ್ಲಿ ಭಾಗವಹಿಸಿ ಆಟಗಾರರನ್ನು ಪ್ರೋತ್ಸಾಹಿಸಿದರು. ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಆಗಮಿಸಿದ ನೂರಾರು ಕ್ರೀಡಾಪ್ರೇಮಿಗಳು ಈ ಕ್ರೀಡಾ ಹಬ್ಬದ ಯಶಸ್ಸಿಗೆ ಸಾಕ್ಷಿಯಾದರು. ಕೋಶಾಧಿಕಾರಿ ಯಶವಂತ್, ಉಪಾಧ್ಯಕ್ಷರಾದ ನವೀನ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವಸಂತ್ ಪೂಜಾರಿ, ಸಚಿನ್ ಶೆಟ್ಟಿ, ಕ್ರಿಕೆಟ್ ಕ್ರೀಡಾಕೂಟ ಸಮಿತಿ ಸದಸ್ಯರಾದ ಪ್ರಕಾಶ್ ಕಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here