ರಾಜಧಾನಿ ಬೆಂಗಳೂರಿನಲ್ಲಿ ಕೊಠಾರಿ – ಕೊಟ್ಟಾರಿ ಸಮುದಾಯ ಕುಟುಂಬ ಮಿಲನದ ಸಂಭ್ರಮದ ಸಮಾರಂಭ

0
109

ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ ) ಬೆಂಗಳೂರು ಇವರಿಂದ. ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಶ್ರೀ ಸೂಕ್ತ ಹೋಮ ಮತ್ತು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆಯನ್ನು
ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ ಇವರು ಸಮಸ್ತ ಸಮುದಾಯದ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಆಯೋಜಿಸಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಖ್ಯಾತ ಪ್ರಾರ್ಥನಾ ಸ್ಥಳವಾಗಿರುವ ಪುತ್ತಿಗೆ ಮಠದಲ್ಲಿ ದಿನಾಂಕ 14-12-2025 ರ ಭಾನುವಾರದಂದು ಸಮಸ್ತ ಕುಲ ಬಾಂಧವರ ಸಮ್ಮುಖದಲ್ಲಿ ಸಮುದಾಯದ ಕಲ್ಯಾಣಗೋಸ್ಕರ ಸಂಕಲ್ಪಿಸಿ ನಂತರದಲ್ಲಿ ಸಭಾ ಕಾರ್ಯಕ್ರಮ, ಸಮುದಾಯದ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸುಪ್ರಸಿದ್ದ ಕಲಾವಿದರ ಯಕ್ಷಗಾನ ಮತ್ತು ಸಾಧಕರ ಸನ್ಮಾನವು ಅದ್ದೂರಿಯಾಗಿ ನೆರೆವೇರಿತು.

ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ)ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕೊಠಾರಿ ಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅಖಿಲ ಕರ್ನಾಟಕ ಕೊಠಾರಿ ವೆಲ್ ಫೇರ್ ಅಸೋಸಿಯೇಷನ್ (ರಿ) ಬೆಂಗಳೂರು ಇದರ www.akkwa.in ವೆಬ್ ಸೈಟ್ ನ್ನು ದಕ್ಷಿಣ ಕನ್ನಡ ಜಿಲ್ಲಾ ವಿಟ್ಲ ಕ್ಷೇತ್ರ ದ ಮಾಜಿ ಶಾಸಕರಾದ ಶ್ರೀ ಪದ್ಮನಾಭ ಕೊಟ್ಟಾರಿಯವರು ಉದ್ಘಾಟಿಸಿ ಕುಟುಂಬ ಮಿಲನ 2025 ಕಾರ್ಯಕ್ರಮಕ್ಕೆ ಶುಭ ಹಾರೈಸಿ ಸಮುದಾಯವನ್ನು ಉದ್ದೇಶಿಸಿ ಹಿತವಚನ ನುಡಿದರು.

ಕುಟುಂಬ ಮಿಲನ 2025 ರ ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಗೌರವಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೊಟ್ಟಾರಿ, ಉಡುಪಿ ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾದ ಶ್ರೀ ನಾಗಪ್ಪ ಕೊಠಾರಿ,ಜನಪ್ರಿಯ ಗ್ರೂಪ್ ಆಫ್ ಹೋಟೆಲ್ ನ ಮಾಲೀಕರು ಮತ್ತು ಸಮಾಜ ಸೇವಕರದ ಶ್ರೀ ರಾಜೀವ ಕೊಠಾರಿ, ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ನ ಜಿಲ್ಲಾಧ್ಯಕ್ಷರಾದ ಶ್ರೀ ನಾಗೇಶ್ ಕೊಟ್ಟಾರಿ, ಶ್ರೀ ತಾರಾನಾಥ್ ಕೊಟ್ಟಾರಿ, ಶ್ರೀ ಧನಂಜಯ ಕೊಟ್ಟಾರಿ,ಶ್ರೀ ರಾಮ ಕೊಠಾರಿ ಶ್ರೀ ಸುರೇಂದ್ರ ಕೊಠಾರಿ, ಶ್ರೀ ನಾರಾಯಣ ಕೊಠಾರಿ, ಶ್ರೀ ಪಬ್ಲಿಕ್ ಫೈಲ್ ಪತ್ರಿಕೆ ಸಂಪಾದಕರು, ಎಮ್. ಎನ್ ಕೊಟ್ಟಾರಿ,ಶ್ರೀ ಸುರೇಂದ್ರ ಕೊಠಾರಿ ತ್ರಿವೇಣಿ, ಶ್ರೀ ಸಂಜೀವ ಕೊಠಾರಿ ಮತ್ತು ಶ್ರೀಮತಿ ಇಂದುಮತಿ ಉಮೇಶ್ ಕೊಟ್ಟಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಕಿಶನ್ ಕೊಠಾರಿ ಸ್ವಾಗತಿಸಿ ಕುಮಾರಿ ಭೂಮಿಕಾ ಕೊಟ್ಟಾರಿ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಜಯಂತಿ ಹುದಾರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು .

LEAVE A REPLY

Please enter your comment!
Please enter your name here