ಮಂಗಳೂರು: ನಗರದ ಮೊಟ್ಟಮೊದಲ ಸಂಭ್ರಮಾಚರಣೆಗಳ ತಾಣ “ಸೆಲೆಬ್ರಿಕ್ಸ್” ದಿ ಸೆಲೆಬ್ರೇಶನ್ ಕೆಫೆ ಮಂಗಳೂರಿನ ಬೆಂದೂರ್‌ವೆಲ್‌ನ ಲೆಗೆಸಿ ಬಿಲ್ಡಿಂಗ್‌ನ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿತು. ನೂತನ ಸೆಲೆಬ್ರಿಕ್ಸ್ ಸೆಲೆಬ್ರೇಶನ್ ಕೆಫೆಯನ್ನು ಮಂಗಳೂರಿನ ಮಾಸ್ಟರ್ ಶೆಫ್ ಮುಹಮ್ಮದ್ ಆಶಿಕ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಮಂಗಳೂರು ನಗರಕ್ಕೆ ಇದೊಂದು ಹೊಚ್ಚ ಹೊಸ ಯೋಜನೆಯಾಗಿದ್ದು, ಬರ್ತ್ ಡೇ, ಆನಿವರ್ಸರಿ, ಬ್ರೈಡಲ್, ಬೇಬಿ ಶೋವರ್, ಫೇರ್‌ವೆಲ್ ಮೊದಲಾದ ಸಂಭ್ರಮಾಚರಣೆಗೆ ಅತ್ಯುತ್ತಮ ತಾಣವಾಗಿದೆ. ಮಂಗಳೂರಿನಂತಹ ನಗರಕ್ಕೆ ಈ ರೀತಿಯ ಸಂಭ್ರಮಾಚರಣೆಯ ತಾಣದ ಅಗತ್ಯವಿತ್ತು. ಅದನ್ನು ಸೆಲೆಬ್ರಿಕ್ಸ್ ಪೂರೈಸಿದೆ ಎಂದವರು ಶುಭಹಾರೈಸಿದ್ರು…ಇನ್ನೂ ಸೆಲೆಬ್ರಿಕ್ಸ್ ಮಾಲಕಿ ನಗ್ಮಾ ಫರ್ವೀನ್ ಮಾತನಾಡಿ ಸೆಲೆಬ್ರಿಕ್ಸ್ ಸೆಲೆಬ್ರೆಷನ್ ಕೆಫೆ ಯೋಜನೆ ವಿನೂತನವಾಗಿದ್ದು ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ಈ ಯೋಜನೆ ಮತ್ತು ಯೋಚನೆಯನ್ನು ಪರಿಚಯಿಸುತ್ತಿದ್ದೇವೆ. ಇಲ್ಲಿ ಸುಸಜ್ಜಿತ ಎರಡು ಕೊಠಡಿಗಳು, ದೊಡ್ಡ ಪರದೆಯ ಖಾಸಗಿ ಥಿಯೇಟರ್ ವ್ಯವಸ್ಥಗಳನ್ನು ಹೊಂದಿದೆ. ಇನ್ನು ಸಂಭ್ರಮಾಚರಣೆಗೆ ಕೊಠಡಿಯನ್ನು ಗ್ರಾಹಕರ ಬೇಡಿಕೆಗೆ ಅನುಸಾರ ಸಿಂಗರಿಸಿಕೊಡಲಾಗುತ್ತಿದ್ದು, ಅಗತ್ಯ ವಿದ್ದರೆ ಉಪಾಹಾರದ ವ್ಯವಸ್ಥೆಯನ್ನೂ ಮಾಡಿಕೊಡಲಾಗುವುದು. ಗ್ರಾಹಕ ಸ್ನೇಹಿ ಬಜೆಟ್ ನಲ್ಲಿ ಸಂಭ್ರಮಾಚರಣೆಗಳನ್ನು ಅದ್ದೂರಿಯಾಗಿ ಆಚರಿಸುವ ವ್ಯವಸ್ಥೆ ಇಲ್ಲಿದ್ದು ಜಿಲ್ಲೆಯ ಜನ್ರು ಇದ್ರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಹೇಳಿದರು….ಕಾರ್ಯಕ್ರಮದಲ್ಲಿ ಸೆಲೆಬ್ರಿಕ್ಸ್ ಸಂಸ್ಥೆಯ ಮಾಲಕರುಗಳಾದ ಮಹಮ್ಮದ್ ಆಸೀಫ್ ಅಬೂಬ್ಬಕರ್, ಮಹಮ್ಮದ್ ಶಾಹಿಲ್ , ಬದ್ರುದ್ದೀನ್, ಕಾರ್ಯಕ್ರಮ ನಿರೂಪಾಕಿ ಸ್ಪಾರ್ಕಲ್ ಇವೆಂಟ್ಸ್ ಆ್ಯಂಡ್ ಡೆಕೋರ್ಸ್ ಮಾಲಕಿ ಸುಮಯ್ಯ ಶೇಖ್ ಮತ್ತಿತರರು ಉಪಸ್ಥಿತರಿದ್ದರು.