ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿದೆ. ಆದರೆ ಯುದ್ಧ ಯಾವುದಕ್ಕೂ ಪರಿಹಾರವಲ್ಲ. ಯುದ್ದದಿಂದಾಗಿ ಸಹಸ್ರಾರು ಅಮಾಯಕರು ಬಲಿಯಾಗುತ್ತಾರೆ. ಜತೆಗೆ ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟು ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ. ಯುದ್ದವನ್ನು ತಪ್ಪಿಸಲು ಮಾನವರಿಂದ ಅನೇಕ ಪ್ರಯತ್ನಗಳು ನಡೆಯುತ್ತಿದೆ. ಇದರ ಜತೆಗೆ ದೇವರ ಅನುಗ್ರಹಕ್ಕಾಗಿ ಶ್ರೀಕ್ಷೇತ್ರದಲ್ಲಿ ಜೂನ್ 26ರಂದು ಗುರುವಾರ ಬೆಳಗ್ಗೆ11.15ಕ್ಕೆ ಶತ ಸೀಯಾಳಾಭಿಷೇಕ ಮತ್ತು ವಿಶೇಷ ಪೂಜೆ ಜರುಗಲಿದೆ ಎಂದು ಶ್ರೀ ಗೋಕರ್ಣನಾಥ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷರು ಜೈರಾಜ್ ಎಚ್.ಸೋಮಸುಂದರಂ ಹಾಗೂ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷರು ದೇವೇಂದ್ರ ಪೂಜಾರಿ ತಿಳಿಸಿದ್ದಾರೆ.