ಜೂ.21 ರಂದು ಕಲಾಕುಂಚದಿಂದ ಉಚಿತ ಯೋಗ ಶಿಬಿರ ಸಮಾರೋಪ ಸಮಾರಂಭ

0
9

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಿದ್ಧವೀರಪ್ಪ ಬಡಾವಣೆಯ ಶಾಖೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಉಚಿತ ಯೋಗ ಶಿಬಿರ ಜೂನ್ 21 ರಂದು ಶನಿವಾರ ಸಂಜೆ 4 ಗಂಟೆಗೆ ಸಿದ್ಧವೀರಪ್ಪ ಬಡಾವಣೆಯ 4ನೇ ತಿರುವಿನಲ್ಲಿರುವ ಶ್ರೀ ಯಗಟಿ ಮಲ್ಲಿಕಾರ್ಜುನ ನಿಲಯದ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿತ್ತು ಎಂದು ಕಲಾಕುಂಚ ಸಿದ್ಧವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತ ಕಲ್ಲೇಶ್ ತಿಳಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಯವರು ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳಾಗಿ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಕುಸಮ ಲೋಕೇಶ್, ಕಲಾಕುಂಚ ಡಿ.ಸಿ.ಎಂ. ಶಾಖೆಯ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ, ಕಲಾಕುಂಚ ಎಲೆಬೇತೂರು ಶಾಖೆಯ ಅಧ್ಯಕ್ಷರಾದ ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ ಆಗಮಿಸಿದ್ದರು, ಯೋಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭಯಶಸ್ವಿಗೊಳಿಸಿದರು ಕಲಾಕುಂಚ ಸಿದ್ಧವೀರಪ್ಪ ಬಡಾವಣೆಯ ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಮಾ ಏಕಾಂತಪ್ಪ ತಿಳಿಸಿದ್ದಾರೆ. ಶ್ರೀಮತಿ ಸಂಧ್ಯಾ ಶ್ರೀನಿವಾಸ್ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಈ ಸಮಾರಂಭಕ್ಕೆ ಸಿದ್ಧವೀರಪ್ಪ ಬಡಾವಣೆಯ ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುಮಾ ಏಕಾಂತಪ್ಪ ಸ್ವಾಗತಿಸಿದರು. ಕಲಾಕುಂಚದ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಕಲಾಕುಂಚ ಡಿ.ಸಿ.ಎಂ. ಶಾಖೆಯ ಪ್ರಧಾನ ಕಾರ್ಯದರ್ಶಿ ಡಿ.ಹೆಚ್. ಚನ್ನಬಸಪ್ಪ ವಂದಿಸಿದರು.

LEAVE A REPLY

Please enter your comment!
Please enter your name here