ಆಯುಷ್ ಫೆಡರೇಷನ್ ಆಫ್ ಇಂಡಿಯಾ, ಕಾರ್ಕಳ ತಾಲೂಕು ಡಾ| ಟಿ.ಎಂ.ಎ. ಪೈ. ರೋಟರಿ ಆಸ್ಪತ್ರೆ ಕಾರ್ಕಳ ಮತ್ತು AFI ಕಾರ್ಕಳ ಶಾಖೆಯ ಸಹಭಾಗಿತ್ವದಲ್ಲಿ CME ಕಾರ್ಯಕ್ರಮ

0
9

ಕಾರ್ಕಳ: ತಾ: 10-10-2025ರಂದು ಡಾ॥ ಟಿ.ಎಂ.ಎ. ಪೈ. ರೋಟರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಡಾ|| ಟಿ.ಎಂ.ಎ. ಪೈ. ರೋಟರಿ ಆಸ್ಪತ್ರೆ ಕಾರ್ಕಳ ಇದರ ENT ವಿಭಾಗದ ತಜ್ಞ ವೈದ್ಯರಾದ ಡಾ। ದೀಪಿಕಾ ಕಾಮತ್‌ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. Acute Conditions & Emergencies in ENT ಎನ್ನುವ ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಇನ್ನೊಂದು ಮಾಹಿತಿ ಕಾರ್ಯಕ್ರಮದಲ್ಲಿ ಡಾ॥ ಟಿ.ಎಂ.ಎ. ಪೈ. ರೋಟರಿ ಆಸ್ಪತ್ರೆಯ ಸಂದರ್ಶಕ ತಜ್ಞ ವೈದ್ಯರಾದ | ដ 4. 9 Restroration of Quality of life after Head and Neck Surgeries-Case Discussion 2 ವಿಷಯದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾರ್ಕಳ AFIನ ಅಧ್ಯಕ್ಷರಾದ ಡಾ॥ ವಸಂತ್, AFI ಕಾರ್ಯದರ್ಶಿ ಡಾ|| ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. AFIನ ಕಾರ್ಕಳದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಕಾರ್ಕಳ AFIನ ಹಿರಿಯ ವೈದ್ಯರಾದ ಡಾ|| ಭರತೇಶ್ ಜೈನ್‌ರವರು ಡಾ।। ದೀಪಿಕಾ ಕಾಮತ್ ಅವರಿಗೆ ಹಾಗೂ ಕಾರ್ಕಳ AFIನ ಇನ್ನೋರ್ವ ಹಿರಿಯ ವೈದ್ಯರಾದ ಡಾ| ರವಿರಾಜ್ ಶೆಟ್ಟಿಯವರು ಡಾ|| ದೇವರಾಜ ಕೆ. ಅವರಿಗೆ ಗೌರವ ಸ್ಮರಣಿಕೆ ನೀಡಿ ಗೌರವಿಸಿದರು. ಡಾ|| ಪ್ರಮೋದ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಡಾ। ವಸಂತ್ ಸ್ವಾಗತಿಸಿದರು ಹಾಗೂ ಡಾ॥ ಪ್ರದೀಪ್ ಕುಮಾರ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here