ಅಮರ ಸುಳ್ಯ ಕ್ರಾಂತಿಯ ಸ್ಮರಣೆ ಬಾವುಟ ಗುಡ್ಡ ತುಳುನಾಡ ಸ್ವಾತಂತ್ರ್ಯ ದಿನಾಚರಣೆ ಭಕ್ತಿಭಾವದಿಂದ ಆಚರಣೆ – ಅಮರಸುಳ್ಯ ಕ್ರಾಂತಿಯ ಸ್ಮರಣೆ

0
8

ಮಂಗಳೂರು ಬಾವುಟಗುಡ್ಡೆ: ತುಳುನಾಡ ರಕ್ಷಣಾ ವೇದಿಕೆ ಹಾಗೂ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಸಂಯುಕ್ತ ಆಶ್ರಯದಲ್ಲಿ 1837ನೇ ತುಳುನಾಡ ಸ್ವಾತಂತ್ರ್ಯ ದಿನಾಚರಣೆಯನ್ನು ಏಪ್ರಿಲ್ 5ರಂದು ಭಕ್ತಿಭಾವ ಮತ್ತು ಗೌರವದೊಂದಿಗೆ ಆಚರಿಸಲಾಯಿತು.

ಬಾವುಟ ಗುಡ್ಡದಲ್ಲಿ ಬ್ರಿಟಿಷರ ಬಾವುಟ ತೆಗೆದು ತುಳುನಾಡ ಬಾವುಟ ಹಾರಿಸಿ ಸ್ವಾತಂತ್ರ ಘೋಷಣೆ ಮಾಡಿದ ದಿನದ ನೆನಪಿನ ಅಂಗವಾಗಿ ಅಮರಸುಳ್ಯ ಕ್ರಾಂತಿ ಹೋರಾಟ ಸ್ಮರಣಾರ್ಥವಾಗಿ ಬೆಳಗ್ಗೆ 10 ಗಂಟೆಗೆ ಬಾವುಟಗುಡ್ಡೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ, ಸ್ಮರಣಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಕ್ರಾಂತಿಯ ವೀರರನ್ನು ಸ್ಮರಿಸಿ, ಅವರ ತ್ಯಾಗ ಮತ್ತು ಹೋರಾಟವನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತುಳುನಾಡಿನ ಇತಿಹಾಸದಲ್ಲಿ ಅಮರಸುಳ್ಯ ಕ್ರಾಂತಿಯ ಮಹತ್ವವನ್ನು ವಿವರಿಸಿದರು. ಈ ರೀತಿಯ ಆಚರಣೆಗಳ ಮೂಲಕ ಇತಿಹಾಸದ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅತ್ಯಂತ ಅಗತ್ಯವೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆ ಗುತ್ತು ಮಾತನಾಡಿ, “ತುಳುನಾಡಿನ ಸ್ವಾತಂತ್ರ್ಯ ಹೋರಾಟದ ಸ್ಮರಣೆ ನಮ್ಮ ಅಸ್ತಿತ್ವದ ಪ್ರತೀಕ. ಯುವಪೀಳಿಗೆ ಈ ಇತಿಹಾಸವನ್ನು ತಿಳಿದುಕೊಳ್ಳಬೇಕು,” ಎಂದರು.

ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಅವರು ಮಾತನಾಡಿ, “ಅಮರಸುಳ್ಯ ಕ್ರಾಂತಿಯು ತುಳುನಾಡಿನ ಧೈರ್ಯ ಮತ್ತು ಸ್ವಾಭಿಮಾನಕ್ಕೆ ಸಾಕ್ಷಿಯಾಗಿದೆ. ಈ ದಿನಾಚರಣೆಯನ್ನು ಪ್ರತೀ ವರ್ಷ ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಕರ್ತವ್ಯ,” ಎಂದು ಹೇಳಿದರು.

ಒಟ್ಟಾರೆ, ಕಾರ್ಯಕ್ರಮವು ಶ್ರದ್ಧಾ-ಭಕ್ತಿಯೊಂದಿಗೆ ನಡೆಯುತ್ತ, ತುಳುನಾಡಿನ ಸ್ವಾತಂತ್ರ್ಯ ಹೋರಾಟದ ಸ್ಮರಣೆ ಮತ್ತೊಮ್ಮೆ ಜೀವಂತಗೊಂಡಿತು. ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸ್ಥಾಪನ ಸಮಿತಿ ಮತ್ತು ತುಳುನಾಡ ರಕ್ಷಣಾ ವೇದಿಕೆ ಪದಾದಿಕಾರಿಗಳು ಉಪಸ್ಥಿತರಿದರು.

LEAVE A REPLY

Please enter your comment!
Please enter your name here