ಉಡುಪಿ: ವಿಶ್ವದ ಜನಪ್ರಿಯ ನಾಯಕ ಹಾಗೂ ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ” ಎಂದು ಕರೆದು ಅವಮಾನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಇಂದು ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (SP) ಭೇಟಿ ನೀಡಿದ ನಿಯೋಗವು, ಖರ್ಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕೃತ ದೂರು ಸಲ್ಲಿಸಿತು.
ಬಿಜೆಪಿ ಒಬಿಸಿ ಮೋರ್ಚಾ ಉಡುಪಿ ಜಿಲ್ಲಾ ಘಟಕವು ಖರ್ಗೆ ಅವರ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದು, ಪ್ರಧಾನಿ ಹುದ್ದೆ ಹಾಗೂ ದೇಶದ 140 ಕೋಟಿ ಜನರ ಭಾವನೆಗಳಿಗೆ ಖರ್ಗೆ ಅವರು ಘೋರ ಅವಮಾನ ಮಾಡಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷವು ಇಂತಹ ಅಸಂವಿಧಾನಿಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಪ್ರಚೋದನಕಾರಿ ಮಾತುಗಳು ಸಮಾಜದಲ್ಲಿ ಸೌಹಾರ್ದತೆ ಕೆಡಿಸಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿವೆ.
”ಸಂವಿಧಾನಕ್ಕೆ ಗೌರವ ಕೊಡುವ ಯಾರು ಕೂಡ ಇಂತಹ ಪದಬಳಕೆಯನ್ನು ಸಹಿಸುವುದಿಲ್ಲ. ದ್ವೇಷದ ರಾಜಕಾರಣ ನಿಲ್ಲಬೇಕು ಮತ್ತು ಕಾಂಗ್ರೆಸ್ ತಕ್ಷಣವೇ ಕ್ಷಮೆಯಾಚಿಸಬೇಕು” ಎಂದು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಐರೋಡಿ ವಿಠ್ಠಲ್ ಪೂಜಾರಿ, ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷರು ಹಾಗೂ ಉಡುಪಿ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರಾದ ಶ್ರೀ ವಿಜಯ ಕೊಡವೂರು, ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ವರಂಗ, ಮತ್ತು ನಗರಸಭಾ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಪೂಜಾರಿ, ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೀ ಉಮೇಶ್ ನಾಯ್ಕ್ ಚೆರ್ಕಡಿ, ಉಡುಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಶ್ರೀ ಜಯಕರ್ ಆಚಾರ್ಯ, ನಗರಸಭಾ ನಿಕಟಪೂರ್ವ ಸದಸ್ಯರುಗಳಾದ ಶ್ರೀ ಟಿ.ಜಿ. ಹೆಗ್ಡೆ ಹಾಗೂ ಶ್ರೀ ಮಂಜುನಾಥ್ ಮಣಿಪಾಲ, ಶ್ರೀ ಸುಭಾಷಿತ್, ಶ್ರೀ ಸಂತೋಷ್, ಶ್ರೀ ಅಶೋಕ್ ಶೆಟ್ಟಿಗಾರ್, ಶ್ರೀ ದೀಕ್ಷಿತ್ ದೇವಾಡಿಗ, ಶ್ರೀ ಚಿನ್ಮಯ, ಶ್ರೀ ಸುಶಾಂತ್, ಶ್ರೀ ರಾಜೇಂದ್ರ ಪಂದಿಬೆಟ್ಟು, ಶ್ರೀ ಪ್ರಮೋದ್ ಪಡುಕೆರೆ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡು ಖರ್ಗೆ ಅವರ ಹೇಳಿಕೆಯ ವಿರುದ್ಧ ಪ್ರತಿಭಟನಾತ್ಮಕವಾಗಿ ಆಕ್ರೋಶ ವ್ಯಕ್ತಪಡಿಸಿದರು.

