ವಿದ್ಯಾಕಲ್ಪಕ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅಯ್ಕೆಯಾಗಿರುವ ವಿದ್ಯಾರ್ಥಿಗಳಿಗಾಗಿ ‘ಕ್ಷಿತಿಜ’ ಹೆಸರಿನ ಮೂರು ದಿನಗಳ ಉಚಿತ ಕೌಶಲ್ಯ ತರಬೇತಿ ಶಿಬಿರ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಿದ್ದು, ಶಿಬಿರದ ಸಮಾರೋಪ ಸಮಾರಂಭ ದಿ. 25-05-2025 ರಂದು ಸಂಜೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಯಕ್ ಗ್ರೂಪ್ಸ್ ನ ಶ್ರೀ ಪ್ರಸಾದ ನಾಯಕ್ ಸುಜೀರ್ ಶಿಬಿರಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು. ಹಿರಿಯರಾದ ವಿದ್ಯಾಕಲ್ಪಕ ಹಿತೈಶಿ ಶ್ರೀ ಜಯಂತ ಶೆಣೈ ನಗರ, ವಿದ್ಯಾಕಲ್ಪಕ ಸಂಘಟಕ ಶ್ರೀ ಯು ಎಸ್ ಸುರೇಂದ್ರ ನಾಯಕ ಇವರು ಉಪಸ್ಥಿತರಿದ್ದು ಶುಭ ಸಂದೇಶ ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರು ಹಾಗೂ ಶಿಬಿರದ ಪ್ರಾಯೊಜಕ ಸಿ. ಎ. ನಂದಗೋಪಾಲ್ ಶೆಣೈ ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿಗಳು ತಮ್ಮ ನಿರಂತರವಾದ ಛಲ ಸಾಧನೆ, ಧೃಢ ನಿರ್ಧಾರ, ಆತ್ಮವಿಶ್ವಾಸ ದಿಂದ ಮಾತ್ರ ತಮ್ಮ ಗುರಿ ಮುಟ್ಟಲು ಸಾಧ್ಯ ಎಂದು ಜೀವನದ ಘಟಣೆಗಳೊಂದಿಗೆ ಶಿಬಿರಾರ್ಥಿಗಳನ್ನು ಉದ್ದೇಶಿಸಿ ವಿದ್ಯಾರ್ಥಿಗಳಿಗೆ ತಮ್ಮ ಮನೋಸಾಮರ್ಥ್ಯ ಉಪಯೋಗಿಸಿಕೊಂಡು ಜಯಶೀಲರಾಗಿ ಗುರಿಯನ್ನು ಮುಟ್ಟುವ, ಆತ್ಮವಿಶ್ವಾಶ ಬೆಳೆಸುವ ಬಗ್ಗೆ ತಿಳಿಸಿದರು.
ದಿ. 25-05-2025 ರಂದು ಬೆಳಗ್ಗಿನಿಂದ ಸಾಯಂಕಾಲದ ವರೆಗೆ ಹೆಸರಾಂತ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನ ಇವರ ರಂಗಭೂಮಿ ಪ್ರಾತ್ಯಕ್ಷಿಕೆ ತರಬೇತಿ ನಡೆಯಿತು. ಶಿಬಿರಾರ್ಥಿಗಳು ಶಿಬಿರದಲ್ಲಿ ತಾವು ಪಡೆದ ವಿವಿಧ ಅನುಭವಗಳನ್ನು ಸಭೆಯಲ್ಲಿ ಹಂಚಿಕೊಂಡರು. ಸಿಎಒ ಡಾ. ಬಿ. ದೇವದಾಸ ಪೈ ಧನ್ಯವಾದ ಸಮರ್ಪಣೆ ಮಾಡಿದರು. ಲಕ್ಷ್ಮೀ ಕಿಣಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿಶ್ವ ಕೊಂಕಣಿ ಕೇಂದ್ರ ದೊಂದಿಗೆ ವಿದ್ಯಾಕಲ್ಪಕ ಮತ್ತು ವರ್ಧನಿ ಸಂಸ್ಥೆಯು ತರಬೇತಿ ಯೋಜನೆಯ ಸಹಭಾಗಿಗಳಾಗಿರುತ್ತಾರೆ.

