ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

0
206

ವಿಶ್ವವಿದ್ಯಾನಿಲಯ ಕಾಲೇಜು ಬನ್ನಡ್ಕ,ಮೂಡುಬಿದ್ರಿ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪವು ದಿನಾಂಕ 01-04-2025 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಣಬೆಟ್ಟು ಇಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಸಮಾರೋಪ ಭಾಷಣಕಾರರಾಗಿ ಶ್ರೀ ಸುರೇಶ್ ಪೂಜಾರಿ ತಾಳಿದಡಿ, ಅಧ್ಯಕ್ಷರು ಹಳೇವಿದ್ಯಾರ್ಥಿ ಸಂಘ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಣಬೆಟ್ಟು ಮತ್ತು ಸದಸ್ಯರು ಪಾಲಡ್ಕ ಗ್ರಾಮ ಪಂಚಾಯತ್ ಇವರು ಆಗಮಿಸಿದ್ದರು. ಶಿಬಿರಾಧಿಕಾರಿಯಾದ ಶ್ರೀ ರವಿರಾಜ್ ಬಿ. ಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅಸೋಸಿಯೇಟ್ ಡೀನ್, ಸ್ಟೂಡೆಂಟ್ ವೆಲ್ ಫೇರ್, ಎ. ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಷನ್ ಆಫ್ ಡೆಂಟಲ್ ಸೈನ್ಸ್. ಶ್ರೀ ರಾಜೇಶ್ ಪೂಜಾರಿ ಕೆಂಜ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ವರ್ಣಬೆಟ್ಟು. ಶ್ರೀಮತಿ ಮೇಬಲ್ ಡಿ ಸೋಜಾ ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವರ್ಣಬೆಟ್ಟು. ಶ್ರೀ ಪದ್ಮನಾಭ ಎಸ್. ಅಮೀನ್ ಪ್ರಗತಿಪರ ಕೃಷಿಕರು. ಶಿಭಿರಾಧಿಕಾರಿಗಳು ಮತ್ತು ರಾಷ್ಟೀಯ ಸೇವಾ ಯೋಜನೆಯ ನಾಯಕ ಮತ್ತು ನಾಯಕಿಯರು ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಎಲ್ಲಾ ಅತಿಥಿಗಳು ಶಿಬಿರಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಶಿಭಿರಾಧಿಕಾರಿಯಾದ ಕುಮಾರಿ ಪುಷ್ಪ ಶಿಬಿರದ ವರದಿ ವಾಚನ ಮಾಡಿದರು. ನಂತರ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಮತ್ತು ಅಧ್ಯಕ್ಷತೆ ವಹಿಸಿದ ಶ್ರೀ ರವಿರಾಜ್ ಬಿ. ಜಿ ಅಧ್ಯಕ್ಷಿಯ ಮಾತುಗಳನ್ನಾಡಿದರು. ಈ ಕಾರ್ಯಕ್ರಮವನ್ನು ಕುಮಾರಿ ಸಿಂಧೂ ಸ್ವಾಗತಿಸಿ, ಕುಮಾರಿ ಶ್ರೇಯ ಧನ್ಯವಾದ ಸಮರ್ಪಸಿದರು ಕುಮಾರಿ ಸುಕನ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here