ಉಡುಪಿ:ಏಪ್ರಿಲ್ 16 ರಿಂದ 19 ರವರೆಗೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ (ರಿ.) ಬಂಟಕಲ್ಲು ವಯಾ ಶಂಕರಪುರ ನೂತನ ದೈವಸ್ಥಾನ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ, ನೇಮೋತ್ಸವವು ಜರುಗಲಿದೆ.
ನೂತನವಾಗಿ ಪುನರ್ ನಿರ್ಮಿಸಿದ ಸಪರಿವಾರ ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಆಲಯ ಪರಿಗ್ರಹ ಪ್ರವೇಶ ಮತ್ತು ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ವಿದ್ವಾನ್ ಗುಂಡಿಬೈಲು ಶ್ರೀ ಸುಬ್ರಹ್ಮಣ್ಯ ಭಟ್ಟರ ನೇತೃತ್ವದಲ್ಲಿ ನೇರವೇರಲಿದೆ.
ಏಪ್ರಿಲ್ 16ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ, ಏಪ್ರಿಲ್ 17 ರಂದು ಬ್ರಹ್ಮಕಲಶೊತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮಗಳು ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಏಪ್ರಿಲ್ 18ರಂದು ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ತನ್ನಿಮಾನಿಗ ನೇಮೋತ್ಸವ ಹಾಗೂ ಏಪ್ರಿಲ್ 19ನೇ ತಾರೀಖಿನಂದು ಶ್ರೀ ಧೂಮಾವತಿ, ಶ್ರೀ ಬಂಟ ಶ್ರೀ ಗುಳಿಗ ಮತ್ತು ಶ್ರೀ ಕೊರಗಜ್ಜ ದೈವಗಳ ನೇಮೋತ್ಸವ ಜರುಗಲಿದೆ.