ಮಡಿಕೇರಿಯ ರೆಡ್ ಬ್ರಿಕ್ಸ್ ನ ಸಭಾಂಗಣದಲ್ಲಿ, ಸಾಹಿತ್ಯ ಲೋಕದ ಪ್ರತಿಷ್ಠಿತ ಅಂತರರಾಜ್ಯ ಬೂಕರ್ ಪ್ರಶಸ್ತಿಯನ್ನು ‘ಹಾರ್ಟ್ ಲ್ಯಾಂಪ್’ ಕೃತಿಗಾಗಿ ಪಡೆದ ಕೊಡಗಿನ ಹೆಮ್ಮೆಯ ಲೇಖಕಿ ದೀಪಾ ಬಾಸ್ತಿಯವರನ್ನು, ಕೊಡಗು ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ “ಅಭಿವಂದನಾ ದೀಪಾ” ಕಾರ್ಯಕ್ರಮದಡಿಯಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಅಭಿನಂದಿಸಲಾಯಿತು.
ಇದೇ ಸಂದರ್ಭ “ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು” ವತಿಯಿಂದ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ರುಬೀನಾ ಎಂ.ಎ, ಕಾರ್ಯದರ್ಶಿ ನಿವ್ಯ ಕಾವೇರಮ್ಮ, ನಿರ್ದೇಶಕರುಗಳಾದ ಉಡುವೆರ ರೇಖಾ, ಅರುಣ್ ಕುಮಾರ್, ಹೇಮಂತ್ ಪಾರೇರ, ವಿನೋದ್ ಮೂಡಗದ್ದೆರವರು ಅಭಿನಂದಿಸಿ ಶುಭಹಾರೈಸಿದರು.