ಉರುವಾಲು ಕಾರಿಂಜ ಶ್ರೀ ವನಸಾಸ್ತವು ಮತ್ತು ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಅಭಿವೃದ್ಧಿ ಕುರಿತು ಶಾಸಕ ಹರೀಶ್ ಪೂಂಜರವರೊಂದಿಗೆ ಸಮಾಲೋಚನೆ

0
57

ಉರುವಾಲು: ಉರುವಾಲು ಗ್ರಾಮ ಕಾರಿಂಜ ಶ್ರೀ ವನಶಾಸ್ತವು ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರದ ಮೂಲ ಸೌಕರ್ಯ, ಅಭಿವೃದ್ಧಿ ಕಾಮಗಾರಿ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರಿಗೆ ಮನವಿ ಸಲ್ಲಿಸಿ ಸಮಾಲೋಚನೆ ನಡೆಸಲಾಯಿತು. ಸೂಕ್ತ ರೀತಿಯಲ್ಲಿ ಮನವಿಗೆ ಸ್ಪಂದಿಸುವುದಾಗಿ ಶಾಸಕರು ಭರವಸೆಯಿತ್ತರು. ಈ ಸಂದರ್ಭದಲ್ಲಿ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ, ಕಣಿಯೂರು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಯಶವಂತ್, ಶ್ರೀ ವನಸಾಸ್ತವು ಮತ್ತು ಶ್ರೀ ವೀರಭದ್ರ ಸ್ವಾಮಿ ಆಡಳಿತ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ ಕಾರಿಂಜ, ಉಪಾಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ್ಕ, ಕಾರ್ಯದರ್ಶಿ ಪಿ. ಧರ್ಣಪ್ಪ ನಾಯ್ಕ, ಕೋಶಾಧಿಕಾರಿ ವಿಜಯ ಕುಮಾರ್ ಕಲ್ಲಳಿಕೆ, ಲಕ್ಷ್ಮೀನಾರಾಯಣ ರಾವ್, ಓಬಯ್ಯ ಪೂಜಾರಿ, ಉಮಾವತಿ ಕೋಡಿಯಡ್ಕ ಪ್ರಸಾದ್ ಕೇರ್ಪುನಿ, ಗೋಪಾಲಕೃಷ್ಣ ಗೌಡ ಅಲೆಯಿಮಾರ್, ವಿನೋಧರ ಸಾಲ್ಯಾನ್, ಸುರೇಂದ್ರ ಕಾರಿಂಜ, ದುಗ್ಗಪ್ಪ ಗೌಡ, ಟ್ರಸ್ಟ್ ನ ಪದಾಧಿಕಾರಿಗಳು, ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here