ಕೊಡಗಿನ ಕುಲದೇವತೆ ಕಾವೇರಿ ಕೃತಿ ಬಿಡುಗಡೆ

0
109


ವರದಿ ರಾಯಿ ರಾಜ ಕುಮಾರ
ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಅಮೃತ ಪ್ರಕಾಶ ಪತ್ರಿಕೆಯ ಸರಣಿ ಕೃತಿ 45ನೇಯ ಕೃತಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ ಗಣೇಶ್ ರೈ ಅವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿ ಬಂದಿರುವ ಕೊಡಗಿನ ಕುಲದೇವತೆ ಕಾವೇರಿ ಎಂಬ ಕೃತಿಯನ್ನು ಮಂಗಳೂರಿನ ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಾಂಡ ಕೃತಿ ಸೋಮಯ್ಯ ನಗರದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು. ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಕಾವೇರಿ ಮಾತೆಯ ಆದಿಯನ್ನು ವಿವರಣೆ ಮತ್ತು ವರ್ಣ ಚಿತ್ರದ ಮೂಲಕ ಕಣ್ಣಿಗೆ ಬಿ.ಕೆ ಗಣೇಶ್ ರೈ ಅವರು ಕಟ್ಟಿಕೊಟ್ಟಿದ್ದಾರೆ .

ಹೆಚ್ಚಿನ ಎಲ್ಲರಿಗೂ ಕಾವೇರಿ ಮಾತೆಯ ಪುರಾಣ ಕಥೆಗಳ ಪರಿಚಯ ಇರುವುದಿಲ್ಲ. ಈ ಕೃತಿಯ ಓದುಗರ ಮೂಲಕ ಕಥೆಯ ಸಾಕ್ಷಾತ್ಕಾರವಾಗಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಅರೇಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಗೌಡ ಮಾವಜಿ ಮಾತನಾಡಿ ಕೃತಿಯು ಕನ್ನಡ, ಇಂಗ್ಲಿಷ್,ಅರೆ ಭಾಷೆ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬಂದಿದೆ .ಕಾವೇರಿ ಮಾತೆಯ ಪುರಾಣವನ್ನು ತಿಳಿಸುವ ಈ ಕೃತಿಯು ಕನ್ನಡ, ಇಂಗ್ಲಿಷ್, ಅರೇ ಭಾಷೆ ,ತಮಿಳು ಭಾಷೆ ಯಲ್ಲಿ ಬಿಡುಗಡೆ ಗೊಂಡಿದೆ. ಕಾವೇರಿ ಮಾತೆಯ ಪುರಾಣವನ್ನು ತಿಳಿಸುವ ಈ ಕೃತಿಯು ಕಾವೇರಿ ಮಾತೆಯ ಮಹಿಮೆಯನ್ನು ಸಾರಿದೆ .ಒಂದು ಸಂಗ್ರಯ ಯೊಗ್ಯ ಕೃತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೃತಿಯ ಲೇಖಕ ಮತ್ತು ವಿನ್ಯಾಸಗಾರ ಅಮೃತ ಪ್ರಕಾಶ ಪತ್ರಿಕೆಯ ಉಪಸಂಪಾದಕ ಬಿ.ಕೆ. ಗಣೇಶ್ ರೈ ಅವರು ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ನಮ್ಮ ಕುಡ್ಲ ವಾಹಿನಿಯ ವಾತಾವಾಚಕಿ ಡಾ. ಪ್ರಿಯ ಹರೀಶ್ ನಿರ್ವಹಿಸಿದರು.
.

LEAVE A REPLY

Please enter your comment!
Please enter your name here