ಸಾಣೂರು ಸೇಣರಬೆಟ್ಟು ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವಕ್ಕೆ ಕ್ಷಣಗಣನೆ : ನ.14ರಂದು ಹೊನಲು ಬೆಳಕಿನ ಕಂಬಳ

0
32

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸೇಣರಬೆಟ್ಟು ಬಳಿಯ ಪ್ರತಿಷ್ಠಿತ ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ನವೆಂಬರ್ 14ರಂದು ಹೊನಲು ಬೆಳಕಿನ ಕಂಬಳೋತ್ಸವ ನಡೆಯಲಿದೆ.

ಕೊಳಕೆ ಇರ್ವತ್ತೂರಿನ ಅಶೋಕ್ ಕೋಟ್ಯಾನ್ ಅವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಸಾಣೂರಿನ ಜಗದೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಈ ಕಂಬಳೋತ್ಸವವು ದಿನಾಂಕ 14-11-2026ರ ಶನಿವಾರದಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಳ್ಳಲಿದೆ.

ಕಂಬಳದ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಂಬಳೋತ್ಸವದಲ್ಲಿ ನಾಡಿನ ವಿವಿಧ ಭಾಗಗಳ ಕಂಬಳಾಭಿಮಾನಿಗಳು ಹಾಗೂ ಕೋಣಗಳ ಯಜಮಾನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕಂಬಳಾಭಿಮಾನಿಗಳು ತಮ್ಮ ಓಟದ ಕೋಣಗಳೊಂದಿಗೆ ಆಗಮಿಸಿ, ಕಂಬಳೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಕಂಬಳ ಸಮಿತಿಯು ವಿನಂತಿಸಿದೆ.