ಕಾಡುಪ್ರಾಣಿಗಳಿಂದ ಹಾನಿ; ಕಲಾಪದಲ್ಲಿ ಮತ್ತೊಮ್ಮೆ ರೈತರ ಧ್ವನಿಯಾದ ಬೆಳ್ತಂಗಡಿ ಶಾಸಕ

0
133

ಬೆಂಗಳೂರು: ಕಾಡುಪ್ರಾಣಿಗಳಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರು ಧ್ವನಿಯಾಗುತ್ತಲೇ ಇದ್ದಾರೆ. ಕೇವಲ ಕೃಷಿ ಹಾನಿ ಮಾತ್ರವಲ್ಲದೆ ಪ್ರಾಣಹಾನಿ ಕೂಡಾ ಸಂಭವಿಸಿರುವ ವಿದ್ಯಾಮಾನಗಳು ನಡೆದಿವೆ. ಇದೀಗ ಮತ್ತೊಮ್ಮೆ ವಿಧಾನಸಭಾ ಕಲಾಪದಲ್ಲಿ ಗಮನ ಸೆಳೆದಿರುವ ಶಾಸಕರು, ಬೆಳ್ತಂಗಡಿ ತಾಲೂಕು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಕಾಡಾನೆ, ಕಾಡುಹಂದಿ, ನವಿಲು ಹಾಗೂ ಮಂಗಗಳಿಂದ ರೈತರಿಗೆ ತೊಂದರೆಯಾಗುತ್ತಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸರ್ಕಾರದ ಗಮನ ಸೆಳೆದು ಅರಣ್ಯ ಸಚಿವರಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here