ತೆಲಂಗಾಣ : ತೆಲಂಗಾಣದಲ್ಲಿ ಘೋರ ಕೃತ್ಯವೊಂದು ನಡೆದಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಯುವತಿಯೊಬ್ಬಳು ತನ್ನ ಹೆತ್ತ ತಂದೆ-ತಾಯಿಯನ್ನೇ ಮಾದಕ ದ್ರವ್ಯದ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿದ ಘಟನೆ ನಡೆದಿದೆ.
ತೆಲಮಗಾಣದ ವಿಕಾರಾಬಾದ್ ಜಿಲ್ಲೆಯ ಯಾಚಾರಂನಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಸುರೇಖಾ ಪ್ರೇಮ ವಿವಾಹಕ್ಕೆ ಒಪ್ಪದಕಾರಣ ಪೋಷಕರಿಗೆ ಮಾದಕ ದ್ರವ್ಯದ ಇಂಜೆಕ್ಷನ್ ನೀಡಿ ಕೊಂದಿದ್ದಾಳೆ.
ಸುರೇಖಾ ಆ ಗ್ರಾಮದ ದಶರಥ ಮತ್ತು ಲಕ್ಷ್ಮಿ ದಂಪತಿಯ ಪುತ್ರಿ. ಸಂಗರೆಡ್ಡಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತತ್ತಿದ್ದಳು . ಕೆಲವು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಯುವಕನನ್ನು ಭೇಟಿಯಾಗಿ ತನ್ನ ಪ್ರೇಮ ಸಂಬಂಧವನ್ನು ಮುಂದುವರೆಸಿದ್ದಳು.
ಅವನು ಬೇರೆ ಜಾತಿಯ ಯುವಕನಾಗಿದ್ದರಿಂದ, ಆಕೆಯ ಪೋಷಕರು ಅವಳನ್ನು ಮದುವೆಯಾಗಲು ನಿರಾಕರಿಸಿದ ಕಾರಣದಿಂದಾಗಿ, ಸುರೇಖಾ ಅವರನ್ನು ಕೊಲ್ಲಲು ಯೋಜಿಸಿ ರಹಸ್ಯವಾಗಿ ಆಸ್ಪತ್ರೆಯಿಂದ ಔಷಧ ಇಂಜೆಕ್ಷನ್‌ಗಳನ್ನು ತಂದಿದ್ದು , ತನ್ನ ಪೋಷಕರಿಗೆ ಹೆಚ್ಚಿನ ಪ್ರಮಾಣದ ಇಂಜೆಕ್ಷನ್‌ಗಳನ್ನು ನೀಡಿ ಕೊಲೆ ಮಾಡಿದ್ದಾಳೆ.ಅವುಗಳನ್ನು ನೈಸರ್ಗಿಕ ಸಾವುಗಳೆಂದು ಬಿಂಬಿಸಲು ಪ್ರಯತ್ನಿಸಿದ್ದು, ತನ್ನ ಸಹೋದರನಿಗೆ ಸುಳ್ಳು ಮಾಹಿತಿ ನೀಡಿದ್ದಳು.
ಪೊಲೀಸರು ತನಿಖೆ ಆರಂಭಿಸಿ ಆರೋಪಿಯ ಮನೆಯಿಂದ ಖಾಲಿ ಇಂಜೆಕ್ಷನ್ ಬಾಟಲಿಗಳು ಮತ್ತು ಬಳಸಿದ ಸಿರಿಂಜ್‌ಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸರ ವಿಚಾರಣೆಯ ಸಮಯದಲ್ಲಿ, ಪ್ರೇಮ ವಿವಾಹಕ್ಕಾಗಿ ಕೊಲೆಯನ್ನು ಮೊದಲೇ ಯೋಜಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡ್ಡಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.

