ತೀಯಾ ಸೇವಾ ಸಹಕಾರ ಸಂಘದ ದಶಮಾನೋತ್ಸವ ಕಾರ್ಯಕ್ರಮ

0
7

ಮಂಗಳೂರಿನ ಉಳ್ಳಾಲ ಒಳಪೇಟೆ ತೊಕ್ಕೊಟ್ಟು ಶಿವಾನಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ತೀಯಾ ಸೇವಾ ಸಹಕಾರ ಸಂಘದ ದಶಮಾನೋತ್ಸವ ಆಗಸ್ಟ್ 23 ರಂದು ಮಹಾಕಾಳಿ ಪಡ್ಪು ಜೆಪ್ಪು ಮಾಷ್ ಗಾರ್ಡನ್ ನಲ್ಲಿ ನಡೆಯಲಿದೆ.

ಹತ್ತನೇ ವರ್ಷದ ವಾರ್ಷಿಕ ಮಹಾಸಭೆಯ ಜೊತೆಯಲ್ಲಿ ಕ್ರೀಡಾ ಸ್ಪರ್ಧೆ, ವೈದ್ಯಕೀಯ ಶಿಬಿರ, ಪಂಚ ಗ್ಯಾರಂಟಿ ಅನುಷ್ಠಾನ ನೋಂದಾವಣಿ ಶಿಬಿರ, ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ನೋಂದಾವಣೆಯ ಶಿಬಿರ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ದಿನೇಶ್ ಕುಂಪಲ, ಉಪಾಧ್ಯಕ್ಷ ಸುನೀಲ್ ಉಚ್ಚಿಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶವಂತಿ ಉಚ್ಚಿಲ, ಸೂರಜ್ ಕುಮಾರ್, ಅಭಿಜಿತ್ ಬೆಳ್ಚಾಡ ಹಾಜರಿದ್ದರು.

ವರದಿ ರಾಯಿ ರಾಜ ಕುಮಾರ್