ಸುಲ್ಕೇರಿ ಮೊಗ್ರುವಿನಲ್ಲಿ ಹಿಂದೂ ಯುವಸೇನೆ ಸೇವಾ ಸಂಘದ ದಶಮಾನೋತ್ಸವ ಸಂಭ್ರಮ

0
10

ಹಿಂದೂ ಯುವಸೇನೆ ಸೇವಾ ಸಂಘ ಸುಲ್ಕೇರಿ ಮೊಗ್ರು ಇದರ ದಶಮಾನೋತ್ಸವ ಮತ್ತು ಸಂಚಾರ ಚಿತಾಗಾರ ಲೋಕಾರ್ಪಣೆ ಕಾರ್ಯಕ್ರಮವು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸುಲ್ಕೇರಿಮೊಗ್ರು ಇದರ ಸಭಾಂಗಣದಲ್ಲಿ 22.11.2026 ಆದಿತ್ಯವಾರದಂದು ಅಶ್ವಥ್ ಸಾಲ್ಯಾನ್ ವರ್ಪಾಳೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಶ್ರೀ ಹರಿಕೃಷ್ಣ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಸಹಕಾರ್ಯವಾಹ ಮತ್ತು ಡಾಕ್ಟರ್ ಸುಷ್ಮಾ ಡೊಂಗ್ರೆ ವೈದ್ಯರು ಅಳದಂಗಡಿ ಇವರು ಭಾಗವಹಿಸಿದರು.

ಶ್ರೀ ಹರಿಕೃಷ್ಣ ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಕಾರ್ಯವಾಹ ಮಂಗಳೂರು ವಿಭಾಗ ಅವರು ಮಾತಾಡಿ ಗ್ರಾಮ ವಿಕಾಸದ ಪರಿಕಲ್ಪನೆ ಯೊಂದಿಗೆ ಮಕ್ಕಳಿಗೆ ತಿಳುವಳಿಕೆ ಮೂಡಿಸಿದಾಗ ಮುಂದಿನ ಜನಾಂಗಕ್ಕೆ ಅದು ಆರೋಗ್ಯಕರವಾದ ಸಮಾಜಕ್ಕೆ ಅಡಿಗಲ್ಲು ಎಂದು ಹೇಳಿದರು.

ಡಾಕ್ಟರ್ ಸುಷ್ಮಾ ಡೋಂಗ್ರೆ ಅಳದಂಗಡಿಯವರು ಮಾತಾಡಿ ಇವತ್ತಿನ ಜೀವನ ಶೈಲಿಯಲ್ಲಿ ನಮ್ಮ ಆಹಾರ ಪದ್ಧತಿ ವಿಷ ಪೂರಿತ ಇರುವುದು ಕಳವಳಕಾರಿ ಇದರ ಬಗ್ಗೆ ಇಂತಹ ಸಮಾಜ ಸೇವಾ ಸಂಘಟನೆ ಮೂಲಕ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಸಂಘದ ಸ್ಥಾಪಕ ಅಧ್ಯಕ್ಷರಾದ ರವಿ ಸಾಲ್ಯಾನ್ ಇವರು ಸಂಘ ಬೆಳೆದು ಬಂದ ದಾರಿಯ ಬಗ್ಗೆ ಪ್ರಸ್ತಾವನೆ ಇಟ್ಟರು. ಸಂಘದ ಕಾರ್ಯದರ್ಶಿಗಳಾದ ಸುದರ್ಶನ್ ಅಂಬಡೆದಡಿ ಇವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ನೀಡಿದರು.

ಸಂಘದ ಸೇವಾ ಯೋಜನೆ ಭಾಗವಾಗಿ ಇಂದು ಕಾರ್ಯಕ್ರಮದಲ್ಲಿ ಮೂರು ಜನ ಅಸಕ್ತ ಕುಟುಂಬಗಳಿಗೆ ಧನ ಸಹಾಯ ನೀಡಲಾಯಿತು. ಕಾರ್ಯಕ್ರಮವು ಧನುಷ್ ಕಾಡಂಗೆ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂದನ್ ಕುಮಾರ್ ಇವರು ಸ್ವಾಗತವಿತ್ತರು. ಸುಧೀರ್ ಸುವರ್ಣ ಧನ್ಯವಾದ ಮಾಡಿದರು. ಪುರುಷೋತ್ತಮ್ ಹೊಸ ಮನೆ ಪಟ್ಲ ಕಾರ್ಯಕ್ರಮ ನಿರೂಪಿಸಿದರು.