ಬಿ.ಸಿ.ರೋಡಿನಲ್ಲಿ ಜೂ.8ರಂದು ಸ್ವಂತ ಕಟ್ಟಡ ಲೋಕಾರ್ಪಣೆ

0
267

ಬಂಟ್ವಾಳ:ಇಲ್ಲಿನ ಬಂಟ್ವಾಳ ಪೇಟೆಯಲ್ಲಿ ಕಳೆದ 1976ರಲ್ಲಿ ಆರಂಭಗೊಂಡ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ಪೊಳಲಿ ದ್ವಾರ ಬಳಿ ರೂ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ‘ಅಕ್ಷಯ ಸೌಧ’ ಲೋಕಾರ್ಪಣೆ ಮತ್ತು ಪ್ರಧಾನ ಕಚೇರಿ ಸ್ಥಳಾಂತರ ಕಾರ್ಯಕ್ರಮ ಇದೇ 8ರಂದು ಬೆಳಿಗ್ಗೆ ಗಂಟೆ 10.30ಕ್ಕೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಂ.ಕರುಣೇಂದ್ರ ಪೂಜಾರಿ ಕೊಂಬರಬೈಲು ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡ ‘ಅಕ್ಷಯ ಸೌಧ’ ಲೋಕಾರ್ಪಣೆಗೊಳಿಸುವರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ.ಪ್ರಭಾಕರ ಭಟ್ ಕಲ್ಲಡ್ಕ ದೀಪ ಪ್ರಜ್ವಲನಗೊಳಿಸುವರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ‘ ಜಿ.ಆನಂದ್ ಸಭಾಂಗಣ’ ಉದ್ಘಾಟಿಸುವರು. ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗಣಕೀಕರಣ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಭದ್ರತಾ ಕೊಠಡಿ ಉದ್ಘಾಟಿಸುವರು ಎಂದು ಹೇಳಿದರು. ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕ ಪ್ರತಾಪ್ ಸಿಂಹ ನಾಯಕ್, ಡಿಸಿಸಿ ಬ್ಯಾಂಕ್ ನಿದರ್ೇಶಕ ಟಿ.ಜಿ.ರಾಜಾರಾಮ ಭಟ್, ಪುರಸಭೆ ಬಂಟ್ವಾಳ ಅಧ್ಯಕ್ಷ ಬಿ.ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಸ್ಕಾಡ್ಸ್ ಅಧ್ಯಕ್ಷ ರವಿಂದ್ರ ಕಂಬಳಿ, ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಸಹಾಯಕ ನಿಬಂಧಕ ಸುಧೀರ್ ಕುಮಾರ್, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಜಯಂತಿ ವಿ.ಬಂಗೇರ ಮತ್ತಿತರ ಗಣ್ಯರು ಭಾಗವಹಿಸುವರು ಎಂದರು.
ಇದೇ ವೇಳೆ ಬಂಟ್ವಾಳದ ಪ್ರಧಾನ ಕಚೇರಿ ಇಲ್ಲಿಗೆ ಸ್ಥಳಾಂತರಗೊಳ್ಳಲಿದ್ದು, ಈಗಾಗಲೇ ಬಂಟ್ವಾಳ, ಬಿ.ಸಿ.ರೋಡು, ಪಂಜಿಕಲ್ಲು (ಬಂಡಸಾಲೆ) ನಾವೂರು ಶಾಖೆ ಕೃಷಿಕರಿಗೆ ಬಡ್ಡಿರಹಿತ ಮತ್ತು ಶೇ.3ರ ಬಡ್ಡಿ ದರದಲ್ಲಿ ಸಾಲ ವಿತರಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆದಿರಾಜ ಜೈನ್, ನಿದರ್ೇಶಕರಾದ ಬಿ.ಸದಾಶಿವ ಶೆಣೈ, ದಿವಾಕರ ಶೆಟ್ಟಿ ಕುಪ್ಪಿಲ, ಗಣೇಶ್ ದಾಸ್, ಸಿಇಒ ಜಯಪ್ರಕಾಶ್ ಕಾಮತ್ ಇದ್ದರು.

LEAVE A REPLY

Please enter your comment!
Please enter your name here