Saturday, June 14, 2025
HomeUncategorizedವಿವೇಕಾನಂದ ವಸತಿನಿಲಯಗಳಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಯೋಗ ಶಿಬಿರ ಉದ್ಘಾಟನೆ

ವಿವೇಕಾನಂದ ವಸತಿನಿಲಯಗಳಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ಯೋಗ ಶಿಬಿರ ಉದ್ಘಾಟನೆ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೇತೃತ್ವದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ವಿವೇಕಾನಂದ ವಸತಿನಿಲಯದ ಸಹಯೋಗದೊಂದಿಗೆ ಸಂಸ್ಥೆಯ ತಕ್ಷಶಿಲಾ ಹಾಗೂ ಶಾರದಾ ವಸತಿ ನಿಲಯಗಳಲ್ಲಿ 21 ದಿನಗಳ ಯೋಗ ಶಿಬಿರ ಉದ್ಘಾಟನೆಗೊಂಡಿತು.

ತಕ್ಷಶಿಲಾ ವಸತಿನಿಲಯ

ಪದವಿಪೂರ್ವ ಕಾಲೇಜಿನ ತಕ್ಷಶಿಲಾ ವಸತಿನಿಲಯದಲ್ಲಿ SPYSS ಜಿಲ್ಲಾ ಸಂಘಟನಾ ಪ್ರಮುಖರಾದ ಹರಿಪ್ರಸಾದ್ ದೀಪ ಬೆಳಗಿಸುವ ಮೂಲಕ ಯೋಗ ಶಿಬಿರಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ವಸತಿನಿಲಯಗಳ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ ಪ್ರಭು ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ವೆಂಕಟರಮಣ ರಾವ್ ಮಂಕುಡೆ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಮಲಾರಬೀಡು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾರದಾ ವಸತಿನಿಲಯ

ಶಾರದಾ ವಸತಿನಿಲಯದಲ್ಲಿ ಯೋಗ ಶಿಬಿರವನ್ನು ಪುತ್ತೂರಿನ SPYSS ನ ತಾಲೂಕು ವರದಿ ಪ್ರಮುಖರಾದ ಲಕ್ಷ್ಮೀಕಾಂತ್ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಸತಿ ನಿಲಯಗಳ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಇಂದುಶೇಖರ್ ಅವರು ವಹಿಸಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ದಿವ್ಯಾ ಜಿ, SPYSS ಸದಸ್ಯರಾದ ರೂಪಶ್ರೀ ಡಿ. ರೈ  ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಕ್ಷಶಿಲಾ ಹಾಗೂ ಶಾರದಾ ವಸತಿನಿಲಯಗಳಲ್ಲಿ 21 ದಿನಗಳ ಕಾಲ ಬೆಳಗ್ಗೆ 5.15 ರಿಂದ ಈ ಶಿಬಿರ ನಡೆಯಲಿದ್ದು ಪದವಿಪೂರ್ವ ವಿಭಾಗದ ಬಾಲಕ ಹಾಗೂ ಬಾಲಕಿಯರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular