ದುಬೈಯ ನೆಲದಲ್ಲಿ ಅನೇಕ ಧಾರ್ಮಿಕ, ಸಾಂಸ್ಕೃತಿಕ,ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಬಿಲ್ಲವಾಸ್ ಫ್ಯಾಮಿಲಿ ದುಬೈಯ 2026-2028 ನೇ ಸಾಲಿನ ಪದಗ್ರಹಣ ಸಮಾರಂಭವು ದುಬೈಯ ಪ್ರತಿಷ್ಟಿತ ಹೋಟೆಲೊಂದರಲ್ಲಿ 11-07-2026ನೇ ಶನಿವಾರದಂದು ಸರಳ ರೀತಿಯಲ್ಲಿ ಸಂಪನ್ನಗೊಂಡಿತು.
ಸಂಘದ ಗೌರವ ಸಲಹೆಗಾರ ರಾದ ಜಿತೇಂದ್ರ ಸುವರ್ಣ, ಮೋಹನ್ ಅತ್ತಾವರ, ಸತೀಶ್ ಪೂಜಾರಿ, ಶ ಮಾಧವ ಪೂಜಾರಿ, ಪ್ರಕಾಶ್ ಪೂಜಾರಿ,ಪ್ರಭಾಕರ ಸುವರ್ಣ, ಕೃಷ್ಣ ಪೂಜಾರಿ, ಯವರು ನೂತನವಾಗಿ ಆಯ್ಕೆಯಾದ ಸಮಿತಿಯ ಪಧಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಯೆಂದು ಶುಭಹಾರೈದರು.
ಸಂಸ್ಥೆಯ ಅಧ್ಯಕ್ಷರಾಗಿ ದೀಪಕ್ ಎಸ್.ಪಿ. ಅವರು ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪ್ರೇಮ್ ಕೋಟ್ಯಾನ್ ಹಾಗೂ ಜಗನ್ನಾಥ್ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಕೋಟ್ಯಾನ್, ಉಪ ಕಾರ್ಯದರ್ಶಿಯಾಗಿ ಯತೀರಾಜ್ ಕೋಟ್ಯಾನ್, ಖಜಾಂಚಿಯಾಗಿ ಪ್ರಭಾಕರ್ ಪೂಜಾರಿ ಹಾಗೂ ಲೆಕ್ಕ ಪರಿಶೋಧಕರಾಗಿ ಪ್ರಭಾಕರ್ ಸುವರ್ಣ ಕರ್ನಿರೆ ಆಯ್ಕೆಯಾದರು.
ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ಮುಳಿಯ ಹಾಗೂ ಉಪ ಕ್ರೀಡಾ ಕಾರ್ಯದರ್ಶಿಗಳಾಗಿ ರೋಷನ್ ಕೋಟ್ಯಾನ್, ಅಶೋಕ್ ತೋನ್ಸೆ, ಜ್ಯೋತಿ ದೀಪಕ್, ಶ್ಯಾಮಲ ಪೂಜಾರಿ, ಹಿತೇಶ್ ಸುವರ್ಣ, ಚರಣ್ ಪೂಜಾರಿ, ರೂಪೇಶ್ ಪೂಜಾರಿ ಮತ್ತು ವರ್ಷ ಅಶ್ವಿನ್ ಪೂಜಾರಿ ಆಯ್ಕೆಯಾದರು.
ಮನೋರಂಜನ ಕಾರ್ಯದರ್ಶಿಗಳಾಗಿ ಸ್ಮಿತಾ ಅಶೋಕ್ ಹಾಗೂ ಶುಭ ಮನೋಜ್ ಆಯ್ಕೆಯಾಗಿದ್ದು, ಉಪ ಕಾರ್ಯದರ್ಶಿಗಳಾಗಿ ಪ್ರವೀಣ್ ಕರ್ಕೇರ, ಮೋನಪ್ಪ ಪೂಜಾರಿ, ಮಾಧವ್ ಪೂಜಾರಿ, ಯತಿರಾಜ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ, ಮೋಹನ್ ಪೂಜಾರಿ ಹಾಗೂ ಶ್ರುತಿ ಚಂದ್ರು ಪೂಜಾರಿ ನೇಮಕಗೊಂಡರು.
ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸತೀಶ್ ಉಳ್ಳಾಲ್, ಕೃಷ್ಣ ಪೂಜಾರಿ ಹಾಗೂ ಮನೋಜ್ ಬೋಳಾರ್, ಉಪ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಘು ಜತ್ತನ್, ಶಿವ ಪೂಜಾರಿ, ವೇಣುಗೋಪಾಲ್ ಕೋಟ್ಯಾನ್, ರಿತೇಶ್ ಅಂಚನ್, ದೀಪ ಜಗನ್ನಾಥ್, ಸುವರ್ಣ ಸತೀಶ್, ಅಶ್ವಿನಿ ಅಶೋಕ್ ಹಾಗೂ ಅಮೃತ ಪ್ರಭಾಕರ್ ಆಯ್ಕೆಯಾದರು.
ಡಿಜಿಟಲ್ ತಂಡದ ಕಾರ್ಯದರ್ಶಿಯಾಗಿ ಚಂದ್ರು ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಅಶ್ವಿನ್ ಪೂಜಾರಿ ಹಾಗೂ ಮಾಧ್ಯಮ ಸಲಹೆಗಾರರಾಗಿ ರಮೇಶ್ ಸುವರ್ಣ ನೇಮಕಗೊಂಡರು.
ಗೌರವ ಸಲಹೆಗಾರರಾಗಿ ಜಿತೇಂದ್ರ ಸುವರ್ಣ, ಮೋಹನ್ ಅತ್ತವರ, ಸತೀಶ್ ಪೂಜಾರಿ, ಮಾಧವ್ ಪೂಜಾರಿ, ಪ್ರಕಾಶ್ ಪೂಜಾರಿ, ಪ್ರಭಾಕರ್ ಸುವರ್ಣ, ಕೃಷ್ಣ ಪೂಜಾರಿ ಹಾಗೂ ದೇವದಾಸ್ ಸುವರ್ಣ ಆಯ್ಕೆಯಾಗಿದ್ದಾರೆ.
ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ದೀಪಕ್ ಎಸ್.ಪಿ. ಅವರು ಮಾತನಾಡಿ, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ನೀಡಿದ ಸಹಕಾರವನ್ನು ಸ್ಮರಿಸಿದರು. ಹಿರಿಯರಿಂದ ಕಿರಿಯರವರೆಗೆ ಎಲ್ಲ ಸದಸ್ಯರು ಸಂಘಟನೆಯ ಬೆನ್ನೆಲುಬಾಗಿ ನಿಂತು ಇದೇ ರೀತಿಯ ಸಹಕಾರ ನೀಡಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ರವಿ ಕೋಟ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಿತೇಶ್ ಅಂಚನ್ (ಕುಲಶೇಖರ) ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಫ್ಯಾಮಿಲಿ ದುಬೈಯ ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

