ಉಡುಪಿ: ದೆಹಲಿಯಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಉಡುಪಿ ಜಟ್ಕಾ ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಯಿತು.
ಹಿಂಜಾವೇ ಗೋರಕ್ಷಕ್ ಪ್ರಮುಖ್ ಸುನಿಲ್ ಕೆ.ಆರ್. ಮಾತನಾಡಿ, ಭಾರತ ದೇಶವನ್ನು ಇಸ್ಲಾಮಿಕ್ ಮಾಡಬೇಕು ಹಾಗೂ ಕಾಶ್ಮೀರವನ್ನು ನಾಶಗೊಳಿಸುವುದೇ ಭಯೋತ್ಪಾದಕರ ಏಕೈಕ ಉದ್ದೇಶ. ಇಸ್ಲಾಮಿಕ್ ಭಯೋತ್ಪಾದಕರು ಮಾಡುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಭಯೋತ್ಪಾದಕ ಕೃತ್ಯಗಳನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ದೂರಿದರು. ಇಸ್ಲಾಮಿಕ್ ಭಯೋತ್ಪಾದಕತೆಯನ್ನು ಬುಡಸಮೇತ ಕಿತ್ತು ಹಾಕಬೇಕು. ಇಲ್ಲದಿದ್ದರೆ ನಮ್ಮ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿಲ್ಲ ಎಂದರು.
ಉದ್ಯಮಿ ಅಜಯ್ ಶೆಟ್ಟಿ ಮಾತನಾಡಿದರು. ಜಿಲ್ಲಾ ಪ್ರಮುಖ್ ರತ್ನಾಕರ ಅಮೀನ್, ವೇದಿಕೆಯ ಉಮೇಶ್ ನಾಯ್ಕ್ ಸೂಡಾ, ರಾಜೇಶ್ ವಿಠಲ್, ನಿಖಿಲ್ ಮಂಚಿ, ಸುದೀಪ್ ಕಡಿಯಾಳಿ, ಚಿರಾಗ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರ್, ಬಿಜೆಪಿ ಮುಖಂಡರಾದ ಪ್ರಭಾಕರ ಪೂಜಾರಿ, ವಿಜಯ ಕೊಡವೂರು, ಶ್ರೀನಿಧಿ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ರೇಷ್ಮಾ ಉದಯ್ ಶೆಟ್ಟಿ, ವೀಣಾ ಎಸ್. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

