ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪ್ಪಡಿ ಸಜೀಪ ಮೂಡ ಡಿಸೆಂಬರ 28 ರಂದು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗುವ ಶ್ರೀ ಬಾಲ ಗಣಪತಿ ಮೂಲ ಮಂತ್ರ ಲಕ್ಷ ಜಪ ಯಜ್ಞ ಹಾಗೂ ದೂರ್ವಹೋಮ ಹಾಗೂ 29 ರಂದು ಜರಗುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಮಾಲೋಚನಾ ಸಭೆ ಶ್ರೀ ಶಾರದಾಂಬಿಕ ಭಜನಾ ಮಂದಿರ ಶಾರದಾ ನಗರ ಇಲ್ಲಿ ದೇವಾಳದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾ ಜೆಗುತ್ತು ಅಧ್ಯಕ್ಷತೆಯಲ್ಲಿ ಜರಗಿತು.
ಸಜಿಪ ಮಾಗಣೆ ತಂತ್ರಿ ಎ0 ಸುಬ್ರಹ್ಮಣ್ಯ ಭಟ್ ಕಲಿಯುಗದಲ್ಲಿ ಸಾಮೂಹಿಕವಾಗಿ ಮಾಡುವ ಧಾರ್ಮಿಕ ಕಾರ್ಯಕ್ರಮಗಳಿಗೆ ವಿಶೇಷ ಫಲವಿದೆ ಲಕ್ಷಕ್ಕಿಂತಲೂ ಅಧಿಕ ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದಾಗಿ ಶುಭ ಹಾರೈಸಿದರು ಭಜನಾ ಮಂದಿರದ ಅಧ್ಯಕ್ಷ ಸತೀಶ ಗಟ್ಟಿ ಪ್ರಮುಖರಾದ ರಾಕೇಶ್ . ತನಿಯಪ್ಪ ಪೂಜಾರಿ .ಶೇಖರ ಪೂಜಾರಿ .ಪ್ರಕಾಶ. ಮೊದಲಾದವರು ಶುಭ ಹಾರೈಸಿದರು ವಿಜೇಶ್ ಪೂಜಾರಿ ಸ್ವಾಗತಿಸಿ ವಂದಿಸಿದರು.

